VIRAL VIDEO| ಕುಟುಂಬವನ್ನು ಉಳಿಸಲು ಪೊಲೀಸರ ಸಾಹಸಕ್ಕೆ ಹ್ಯಾಟ್ಸ್ ಆಫ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪೊಲೀಸರು ಜನರಿಗೆ ರಕ್ಷಣೆ ನೀಡುವುದಲ್ಲದೆ, ಅಗತ್ಯ ಬಿದ್ದರೆ ಪ್ರಾಣವನ್ನೂ ಪಣಕ್ಕಿಡುತ್ತಾರೆ. ಇತ್ತೀಚೆಗಷ್ಟೇ ಬೆಂಕಿ ಅವಘಡದಲ್ಲಿ ಸಿಲುಕಿದ್ದ ಕುಟುಂಬವನ್ನು ರಕ್ಷಿಸಲು ಪೊಲೀಸ್ ಅಧಿಕಾರಿಯೊಬ್ಬರು ಮುಂದಾಗಿದ್ದರು. ಕಾನ್ಪುರ ಬಾದಶಾಹಿ ನಾಕಾದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು, ಬೆಂಕಿ ಕ್ರಮೇಣ ಕಟ್ಟಡದಾದ್ಯಂತ ವ್ಯಾಪಿಸಿತು. ತಕ್ಷಣ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ಮೂರನೇ ಮಹಡಿಯಲ್ಲಿದ್ದ ಕುಟುಂಬ ಬೆಂಕಿಗೆ ಆಹುತಿಯಾಗಿದೆ.

ಪೊಲೀಸ್ ಅಧಿಕಾರಿ ಅಂಕಿತ್ ಯಾವುದೇ ವಿಳಂಬ ಮಾಡದೆ ಕುಟುಂಬವನ್ನು ರಕ್ಷಿಸಲು ಮುಂದಾದರು. ಬೆಂಕಿ ವ್ಯಾಪಿಸಿದ ಮೂರನೇ ಮಹಡಿಯ ಕಿಟಕಿ ಗಾಜುಗಳನ್ನು ಒಡೆಯಲು ಒಡೆದು ಒಳಗೆ ಹೋಗಿದ್ದು, ಅಲ್ಲಿ ಯಾರೂ ಇಲ್ಲದ ಕಾರಣ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

ಕೆಲವರು ಪೊಲೀಸ್ ಅಧಿಕಾರಿ ಅಂಕಿತ್ ಅವರ ಸಾಹಸವನ್ನು ವಿಡಿಯೋ ಮಾಡಿದ್ದಾರೆ. ಟ್ವಿಟರ್ ಬಳಕೆದಾರ @upkhabariya ಇದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಕುಟುಂಬದ ಜೀವ ಉಳಿಸಲು ಪೊಲೀಸ್ ಅಧಿಕಾರಿಯ ಸಾಹಸವನ್ನು ಶ್ಲಾಘಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!