ರಸ್ತೆ ಅಪಘಾತ: ಹಜ್ ಯಾತ್ರೆಗೆ ತೆರಳಿದ್ದ ಮುಂಡಗೋಡದ ಒಂದೇ ಕುಟುಂಬದ ಮೂವರು ಸಾವು

ಹೊಸದಿಗಂತ ವರದಿ,ಮುಂಡಗೋಡ:

ಮಕ್ಕಾ ಮದಿನಾ ದರುಶನಕ್ಕೆ ತೆರಳಿದ್ದ ಮುಂಡಗೋಡ ಪಟ್ಟಣದ ನಿವಾಸಿಗಳು ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂರು ಜನರು ಮೃತಪಟ್ಟ ಘಟನೆ ನಡೆದಿದೆ.

ಪಟ್ಟಣದ ತಾಲೂಕು ಪಂಚಾಯಿತಿ ಎದುರಿನ‘ರೋಣ್ಸ್ ಮೆಡಿಕಲ್ಸ್’ ಮಾಲೀಕರಾದ ಫಯಾಜ್ ರೋಣ, ಅವರ ಪತ್ನಿ ಆಫ್ರಿನಾ ಬಾನು, ಸಹೋದರನ ಮಗ ಆಯಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ .

ಅವರು ಪ್ರಯಾಣಿಸುತ್ತಿದ್ದ ಲ್ಯಾಂಡ್ ಕ್ರೂಸರ್ ಕಾರಿನ ಟೈಯರ್ ಸ್ಫೋಟಗೊಂಡು ಭೀಕರ ಅಪಘಾತ ಸಂಭವಿಸಿದೆ .

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಫಯಾಜ್ ರೋಣ ಅವರ ಇಬ್ಬರು ಮಕ್ಕಳೂ ಸಹ ಗಂಭೀರ ಗಾಯಗೊಂಡಿದ್ದಾರೆ. ಮದಿನಾ ದಿಂದ ೬೦ಕಿಮೀ ಅಂತರದಲ್ಲಿ ನಡೆದಿರುವ ಅಪಘಾತವಾಗಿದೆ.

ಸೌದಿ ಅರೇಬಿಯಾದಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಸಹೋದರನ ಕುಟುಂಬದ ಜೊತೆಗೂಡಿ, ಪವಿತ್ರ ಮದಿನಾಕ್ಕೆ ಹೊರಟಿರುವ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಫಯಾಜ್ ರೋಣ ಕುಟಂಬದವರು ಮಾ.೨೬ ರಂದು ಮಕ್ಕಾದರುಶನಕ್ಕೆ ಮುಂಡಗೋಡದಿಂದ ಪ್ರಯಾಣಿಸಿದ್ದರು. ಏ.೬ರ ರಾತ್ರಿ ರಸ್ತೆ ಅಪಘಾತ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!