ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಎರಡನೇ ಬಾರಿಗೆ ಬಳ್ಳಾರಿ ಜೈಲಿಗೆ ಹೋಗುತ್ತಿದ್ದಾರೆ. ಹೌದು. 2017 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಚೌಕವನ್ನು ಈ ಜೈಲಿನಲ್ಲಿ ಚಿತ್ರೀಕರಿಸಲಾಗಿದೆ. ಅಂತಿಮ ಭಾಗವನ್ನು ಖಾಲಿ ಜೈಲು ಕೋಣೆಗಳಲ್ಲಿ ಚಿತ್ರೀಕರಿಸಲಾಯಿತು.
ಈ ಚಿತ್ರದ ಶೂಟಿಂಗ್ಗಾಗಿ ದರ್ಶನ್ ಜೈಲಿಗೆ ಹೋಗಿದ್ದರು. ದರ್ಶನ್ ಈ ಚಿತ್ರದಲ್ಲಿ ರಾಬರ್ಟ್ ಪಾತ್ರದಲ್ಲಿ ನಟಿಸಿದ್ದಾರೆ. ಅಂದು ಶೂಟಿಂಗ್ಗೆ ಆಗಮಿಸಿದ್ದ ದರ್ಶನ್ ಈಗ ಅದೇ ಜೈಲಿಗೆ ಸೆರೆವಾಸಕ್ಕೆ ಆಗಮಿಸುತ್ತಿದ್ದಾರೆ.
ದರ್ಶನ್ ರಿಮಾಂಡ್ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ. ಬಂಧನದ ಅವಧಿಯನ್ನು ಇನ್ನೂ 14 ದಿನಗಳವರೆಗೆ ವಿಸ್ತರಿಸುವ ನಿರೀಕ್ಷೆಯಿದೆ.
ನ್ಯಾಯಾಧೀಶರು ಕಸ್ಟಡಿಗೆ ಆದೇಶ ನೀಡಿದ ಬಳಿಕ ಪೊಲೀಸರು ಭಾರೀ ಭದ್ರತೆಯಲ್ಲಿ ಮಧ್ಯಾಹ್ನ 1 ಗಂಟೆ ನಂತರ ಬಳ್ಳಾರಿ ಜೈಲಿಗೆ ತೆರಳಲಿದ್ದಾರೆ.