ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ‘ರಾಮಾಯಣ’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಏ.30ರಂದು ‘ರಾಮಾಯಣ’ ಚಿತ್ರೀಕರಣದಲ್ಲಿ ಯಶ್ ಪಾಲ್ಗೊಂಡಿದ್ದಾರೆ.
ಏ.30ರಂದು ಯಶ್ ‘ರಾಮಾಯಣ’ ಸೆಟ್ಗೆ ಎಂಟ್ರಿ ಕೊಟ್ಟಿದ್ದಾರೆ. ರಾವಣ ಪಾತ್ರಧಾರಿಯಾಗಿ ಮೊದಲ ದೃಶ್ಯದಲ್ಲಿ ಯಶ್ ನಟಿಸಿದ್ದಾರೆ. ಏ.30ರಿಂದ ಒಂದು ತಿಂಗಳುಗಳ ಕಾಲ ಯಶ್ ‘ರಾಮಾಯಣ ಪಾರ್ಟ್ 1’ ಶೂಟಿಂಗ್ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಅದಕ್ಕಾಗಿ ಮುಂಬೈನಲ್ಲಿಯೇ ಯಶ್ ಬೀಡು ಬೀಡಲಿದ್ದಾರೆ. ಸದ್ಯದಲ್ಲೇ ಸಾಯಿ ಪಲ್ಲವಿ , ರಣಬೀರ್ ಕಪೂರ್, ಸನ್ನಿ ಡಿಯೋಲ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.