ರಾಮಾಯಣ ಶೂಟ್‌ ಮುನ್ನ ಉಜ್ಜಯಿನಿ ಮಹಾಕಾಳೇಶ್ವರನ ಮೊರೆ ಹೋದ ರಾಕಿಂಗ್ ಸ್ಟಾರ್ ಯಶ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಕಿಂಗ್​ ಸ್ಟಾರ್​ ಯಶ್​​ ಸಾಲು ಸಾಲು ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ನಟ ಯಶ್ ರಾವಣನಾಗಿ ಮಿಂಚಲು ಸಜ್ಜಾಗಿದ್ದಾರೆ. ಈ ಮಧ್ಯೆ ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯಕ್ಕೆ ನಟ ಯಶ್​ ಭೇಟಿ ಕೊಟ್ಟಿದ್ದಾರೆ.

ನಟ ಯಶ್ಗೆ ದೇವರ ಮೇಲೆ ಅಪಾರ ಭಕ್ತಿ ಇದೆ. ಯಾವುದೇ ಕೆಲಸ ಶುರು ಮಾಡುವ ಮೊದಲು ದೇವರಿಗೆ ವಿಶೇಷವಾದ ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗಾಗಿ, ‘ರಾಮಾಯಣ’ ಸಿನಿಮಾದ ಶೂಟ್​ಗೂ ಮೊದಲು ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ನಾಳೆಯಿಂದ ರಾಮಾಯಾಣ 2 ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದೆ. ಹೀಗಾಗಿ ಶೂಟಿಂಗ್ ಆರಂಭಕ್ಕೂ ಪ್ರಾರಂಭಿಸುವ ಮೊದಲು ನಟ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋಗಿ ವಿಶೇಷವಾಗಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!