ಬಾಲಿವುಡ್ ನಲ್ಲಿ ರಾಕಿ ಭಾಯ್​ ಆರ್ಭಟ: ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್-2 ದಾಖಲೆಯ ಕಲೆಕ್ಷನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎಲ್ಲೆಡೆ ಈಗಾಗಲೇ ಸಖತ್ ಸದ್ದು ಮಾಡುತ್ತಿರುವ ಕೆಜಿಎಫ್-2 ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು, ಟಾಲಿವುಡ್ ,ಬಾಲಿವುಡ್ರಾ ನಲ್ಲಿ ಖಿಭಾಯ್ ದೇ ಹವಾ ಈಗ ಮುಂದುವರೆದಿದೆ.
‘ಕೆಜಿಎಫ್ 1’ರ ಮುಂದುವರಿದ ಭಾಗವಾಗಿದ್ದ ಕೆಜಿಎಫ್-2 ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಏಪ್ರಿಲ್ 14ರಂದು ತೆರೆಕಂಡ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಇದು ದಾಖಲೆಗಳನ್ನು ನಿರ್ಮಿಸಿದೆ.
ಕಾಮ್‌ಸ್ಕೋರ್ ವರದಿಯ ಪ್ರಕಾರ, ‘ಕೆಜಿಎಫ್’ ಏಪ್ರಿಲ್ 15 ರಿಂದ 17ರ ನಡುವೆ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಸಿನಿಮವಾಗಿದೆ. ಬಿಡುಗಡೆಯಾದ ನಾಲ್ಕೇ ದಿನದಲ್ಲಿ ವಿಶ್ವದಾದ್ಯಂತ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಟ್ರೇಡ್​​ ಮೂಲಗಳ ಪ್ರಕಾರ ಮೊದಲ ದಿನ 165.37 ರೂ. ಕೋಟಿ, ಎರಡನೇ ದಿನ ರೂ.139.25, ಮೂರನೇ ದಿನ ರೂ.115.08 ಮತ್ತು ನಾಲ್ಕನೇ ದಿನ ರೂ. 132.13 ಕೋಟಿ ಗಳಿಸಿದೆ.
ಬಾಲಿವುಡ್​ನಲ್ಲಿ ದಾಖಲೆ :
ಬಾಲಿವುಡ್​​ನಲ್ಲಿ ಇತಿಹಾಸ ನಿರ್ಮಿಸಿರುವ ‘ಕೆಜಿಎಫ್ 2’ ಮತ್ತೊಂದು ಸಾಧನೆ ಮಾಡಿದೆ. ಅತಿ ವೇಗದಲ್ಲಿ 200 ಕೋಟಿ ಕ್ಲಬ್ ಸೇರಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾಲ್ಕು ದಿನಗಳ ಅಂತ್ಯಕ್ಕೆ 193.99 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ದಿನ ರೂ. 53.95, ಎರಡನೇ ದಿನ ರೂ. 46.79, ಮೂರನೇ ದಿನ ರೂ. 42.90 ಮತ್ತು ನಾಲ್ಕನೇ ದಿನ ರೂ. 50.35, ಐದನೇ ದಿನ ಅಂದರೆ ಸೋಮವಾರ ಇದು 200 ಕೋಟಿ ದಾಟಿದೆ ಎಂದೇ ಹೇಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!