ಹೊಸದಿಗಂತ ಡಿಜಿಟಲ್ ಡೆಸ್ಕ್
ರೋಹಿತ್ ಶರ್ಮಾ ಸಿಡಿಸಿದ ಅಬ್ಬರದ ಶತಕದ ನೆರವಿನಿಂದ ಟೀಮ್ ಇಂಡಿಯಾ 2ನೇ ಏಕದಿನ ಪಂದ್ಯದಲ್ಲಿ 4 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಈ ಮೂಲಕ ರೋಹಿತ್ ಶರ್ಮಾ ಪಡೆ ಇನ್ನು ಒಂದು ಪಂದ್ಯ ಇರುವಂತೆಯೇ ಏಕದಿನ ಸರಣಿಯನ್ನ ವಶಪಡಿಸಿಕೊಂಡಿದೆ.
ಕಟಕ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 305ರನ್ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಅತಿಥೇಯ ತಂಡ 44.3 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಚೇಸ್ ಮಾಡಿ ಗೆಲುವು ಸಾಧಿಸಿತು.
ನಾಯಕ ರೋಹಿತ್ ಶರ್ಮಾ 90 ಎಸೆತಗಳಲ್ಲಿ 119 ರನ್ಗಳಿಸಿ ಗೆಲುವಿನ ರೂವಾರಿಯಾದರು. ನಾಯಕನಿಗೆ ಉಳಿದ ಆಟಗಾರರು ಉತಮ್ಮ ಬ್ಯಾಟಿಂಗ್ ನಡೆಸಿ ಸಾಥ್ ನೀಡಿದರು.