ಪಠ್ಯಪುಸ್ತಕ ಸಮಿತಿ ವಿಸರ್ಜನೆ ಆಗಿದೆ ಅಷ್ಟೇ, ರದ್ದು ಮಾಡಿಲ್ಲ-ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ ಚಿತ್ರದುರ್ಗ:‌ 

ರೋಹಿತ್‌ ಚಕ್ರತೀರ್ಥರ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯ ಮುಗಿದಿರುವುದರಿಂದ ಸಮತಿಯನ್ನು ವಿಸರ್ಜನೆ ಮಾಡಿದ್ದೇವೆ ಹೊರತು, ರದ್ದು ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜಿಲ್ಲೆಯ ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಗ್ರಾಮದಲ್ಲಿ ಹೇಳಿದ್ದಾರೆ. ಈ ಬಗ್ಗೆ ಮತ್ತೊಂದು ಹೊಸ ಸಮಿತಿ ರಚನೆ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮದು ಬಸವ ಪಥದ ಸರ್ಕಾರ ಎಂದು ಈ ಮೊದಲೇ ಹೇಳಿದ್ದೇನೆ. ಪಠ್ಯದಲ್ಲಿ ಬಸವಣ್ಣನವರು ರಚಿಸಿದ ಹಲವಾರು ಅತ್ಯುತ್ತಮ ವಚನಗಳಿವೆ. ಬಸವಣ್ಣನವರ ಪಠ್ಯದಲ್ಲಿ ಒಂದು ಲೈನ್ ವ್ಯತ್ಯಾಸವಾಗಿರುವುದು ಬಿಟ್ಟರೆ ಉಳಿದಂತೆ ಬರಗೂರು ಸಮಿತಿ ರಚಿಸಿದ್ದ ಪಠ್ಯದಲ್ಲಿ ಇದ್ದಂತೆ ಇದೆ ಎಂದಿದ್ದಾರೆ. ಬಸವಣ್ಣನವರ ಪಠ್ಯದ ವ್ಯತ್ಯಾಸ ಸರಿಪಡಿಸಿ, ಆದಷ್ಟು ಶೀಘ್ರದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ಒದಗಿಸುತ್ತೇವೆ ಎಂದರು. ಪಠ್ಯದಲ್ಲಿ ಹೆಗಡೇವಾರ್ ಭಾಷಣದ ಕೈ ಬಿಡುವುದಿಲ್ಲ, ಕೈ ಬಿಡಲು ಅಂತಹ ತಪ್ಪೇನಿದೆ..? ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!