Friday, December 8, 2023

Latest Posts

18,000 ರನ್‌ ಪೂರೈಸಿದ ರೋಹಿತ್‌ ಶರ್ಮಾ: ಸಚಿನ್​, ವಿರಾಟ್​ ಪಟ್ಟಿ ಸೇರಿದ ಹಿಟ್‌ಮ್ಯಾನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌‌

ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿ ಟೀಮ್ ಇಂಡಿಯಾಕ್ಕೆ ಆಸರೆಯಾದ ರೋಹಿತ್‌ ಶರ್ಮಾ (Rohit Sharma) ವಿಶೇಷ ಸಾಧನೆ ಮಾಡಿ ದಿಗ್ಗಜರ ಎಲೈಟ್‌ ಪಟ್ಟಿ ಸೇರಿದ್ದಾರೆ.

100 ಅಂತಾರಾಷ್ಟ್ರೀಯ ಪಂದ್ಯದ ನಾಯಕತ್ವವನ್ನು ನಿಭಾಯಿಸುತ್ತಿರುವ ರೋಹಿತ್​ ಶರ್ಮಾ ಹೊಸ ದಾಖಲೆಯನ್ನು ಬರೆದಿದ್ದಾರೆ.ಈ ಪಂದ್ಯದಲ್ಲಿ ರೋಹಿತ್​ 18,000 ಅಂತಾರಾಷ್ಟ್ರೀಯ ರನ್​ ಪೂರೈಸಿದ ದಾಖಲೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ತಂಡ ಶುಭಮನ್​ ಗಿಲ್​ (9), ವಿರಾಟ್ ಕೊಹ್ಲಿ​ (0) ಮತ್ತು ಶ್ರೇಯಸ್​ ಅಯ್ಯರ್ (4) ಬೇಗ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ಶರ್ಮಾ ವಿಕೆಟ್​ ಪತನದ ನಡುವೆಯೂ ಜವಾಬ್ದಾರಿಯುತ ಇನ್ನಿಂಗ್ಸ್​ ಆಡಿದರು. ಪಂದ್ಯದಲ್ಲಿ 48 ರನ್​ ಗಳಿಸುತ್ತಿದ್ದಂತೆ 18,000 ಮೈಲಿಗಲ್ಲು ತಲುಪಿದರು. ಇಷ್ಟು ರನ್​ ಕಲೆಹಾಕಿದ ಭಾರತದ ಐದನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ರೋಹಿತ್​​ ಶರ್ಮಾ ಅವರಿಗಿಂತ ಮೊದಲು ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ (664 ಇನ್ನಿಂಗ್ಸ್​, 34,357 ರನ್), ವಿರಾಟ್​ ಕೊಹ್ಲಿ* (513 ಇನ್ನಿಂಗ್ಸ್​​ , 26,121 ರನ್​) ರಾಹುಲ್​ ದ್ರಾವಿಡ್​ (504 ಇನ್ನಿಂಗ್ಸ್​, 24,064 ರನ್​) ಮತ್ತು ಸೌರವ್​ ಗಂಗೂಲಿ (421 ಇನ್ನಿಂಗ್ಸ್​​, 18,433​ ರನ್​) ಕಲೆಹಾಕಿದ್ದಾರೆ.

ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಮತ್ತು ವೆಸ್ಟ್ ಇಂಡೀಸ್ ಮಾಜಿ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ಅವರಂತಹ ವಿಶ್ವ ದರ್ಜೆಯ ಬ್ಯಾಟರ್‌ಗಳ ಹೆಸರನ್ನು ಒಳಗೊಂಡಿರುವ ಐತಿಹಾಸಿಕ ಸಾಧನೆಯನ್ನು ಮಾಡಿದ 19 ಇತರ ಬ್ಯಾಟರ್‌ಗಳ ಪಟ್ಟಿಗೆ ರೋಹಿತ್​ ಸೇರ್ಪಡೆ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!