ಚಾಂಪಿಯನ್ಸ್ ಟ್ರೋಫಿಯಲ್ಲಿ ದಾಖಲೆ ಬರೆದ ರೋಹಿತ್ ಶರ್ಮಾ: ODIನಲ್ಲಿ 11 ಸಾವಿರ ರನ್ ಬಾರಿಸಿದ ಟೀಮ್ ಇಂಡಿಯಾ ನಾಯಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ಮೈಲುಗಲ್ಲು ತಲುಪಿದ್ದಾರೆ.

ಈ ಪಂದ್ಯದಲ್ಲಿ 12 ರನ್​ಗಳಿಸುತ್ತಿದ್ದಂತೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ 11000 ರನ್​ ಪೂರೈಸಿದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 11000 ರನ್ ಗಳನ್ನ ವೇಗವಾಗಿ ತಲುಪಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರೋಹಿತ್ ಶರ್ಮಾ ಟೀಮ್ ಇಂಡಿಯಾ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನ ಹಿಂದಿಕ್ಕಿದರು. ಆದರೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭಾರತದ ರನ್​ಮಷಿನ್​ ಖ್ಯಾತಿಯ ವಿರಾಟ್ ಕೊಹ್ಲಿ ಇದ್ದಾರೆ.

ರೋಹಿತ್ ಶರ್ಮಾ 261 ಇನ್ನಿಂಗ್ಸ್​ನಲ್ಲಿ ಈ ಮೈಲುಗಲ್ಲು ಸ್ಥಾಪಿಸಿದರೆ, ಸಚಿನ್ ತೆಂಡೂಲ್ಕರ್ 11 ಸಾವಿರ ರನ್​ಗಳಿಸಲು 276 ಇನ್ನಿಂಗ್ಸ್​ ತೆಗೆದುಕೊಂಡಿದ್ದರು. ಆದರೆ ಕಿಂಗ್ ಕೊಹ್ಲಿ ಕೇವಲ 222 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ರೋಹಿತ್ ಶರ್ಮಾ 261 ಇನ್ನಿಂಗ್ಸ್‌ಗಳಲ್ಲಿ 11000 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ 264 ರನ್‌ಗಳು. ಅವರ ಸರಾಸರಿ 49.27. ಅವರು 32 ಶತಕಗಳು, 3 ದ್ವಿಶತಕಗಳು ಮತ್ತು 57 ಅರ್ಧಶತಕಗಳನ್ನು ಗಳಿಸಿದ್ದಾರೆ.

ವಿರಾಟ್, ಸಚಿನ್ ಹೊರೆತುಪಡಿಸಿದರೆ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 286, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ 288 ಇನ್ನಿಂಗ್ಸ್, ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್ 298 ಇನ್ನಿಂಗ್ಸ್​ಗಳಲ್ಲಿ 11 ಸಾವಿರ ರನ್​ಗಳ ಗಡಿದಾಟಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!