October 6, 2026
Tuesday, October 6, 2026
spot_img

ಭೀಕರ ಬಿರುಗಾಳಿ ಮಳೆಗೆ ಕುಸಿದು ಬಿದ್ದ ಛಾವಣಿಯ ಕಲ್ಲು: ಆರು ವರ್ಷದ ಬಾಲಕಿ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೀದರ್‌ ಜಿಲ್ಲೆಯ ಹುಲಸೂರು ಪಟ್ಟಣದಲ್ಲಿ ನಿನ್ನೆ ತಡರಾತ್ರಿ ಭಾರೀ ಮಳೆ ಸುರಿದಿದ್ದು, ಮನೆಯ ಮೇಲಿದ್ದ ಕಲ್ಲು ಬಿದ್ದು ಆರು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ಹುಲಸೂರಿನ ತಹಶೀಲ್ದಾರ ಕಚೇರಿ ಬಳಿಯ ಮನೆಯಲ್ಲಿ ಆರು ವರ್ಷದ ಮಾಹೆರಾ ಪೈಸ್‌ ಇಸ್ಮಾಯಿಲ್‌ ಶೇಖ್‌ ತನ್ನ ಪೋಷಕರ ಜೊತೆ ಮಲಗಿದ್ದ ವೇಳೆ ಅವಘಡ ಸಂಭವಿಸಿದೆ.

ಮನೆಯಲ್ಲಿ ಮೂವರು ಮಲಗಿದ್ದಾಗ ಬಿರುಗಾಳಿ ಹಾಗೂ ಆಲೂಕಲ್ಲಿನ ಮಳೆಗೆ ಛಾವಣಿ ಹಾರಿ ಹೋಗಿದೆ. ಮೇಲ್ಛಾವಣಿ ಹಾರಬಾರದು ಎಂದು ಇಟ್ಟಿದ್ದ ಕಲ್ಲು, ಇಟ್ಟಿಗೆಗಳು ಬಾಲಕಿ ಮೇಲೆ ಬಿದ್ದಿದ್ದು, ಆಕೆ ಮೃತಪಟ್ಟಿದ್ದಾಳೆ. ಪೋಷಕರಿಗೆ ಗಂಭೀರ ಗಾಯಗಳಾಗಿವೆ.

ಸ್ಥಳೀಯರು ತಕ್ಷಣ ಆಗಮಿಸಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಪೋಷಕರ ಆರೋಗ್ಯ ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

Must Read