ಹೊಸದಿಗಂತ ಡಿಜಿಟಲ್ ಡೆಸ್ಕ್: ‘
ದಾವಣಗೆರೆಯ ಹೊನ್ನೂರು ಕ್ರಾಸ್ ಬಳಿ ಡಿ.5 ರಂದು ಮಹಿಳೆಯನ್ನು ಕಚ್ಚಿ ಕೊಂದಿದ್ದ ರಾಟ್ ವೀಲರ್ ನಾಯಿಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ರಾಟ್ವೀಲರ್ ನಾಯಿಗಳ ದಾಳಿಗೆ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಿ ಮಾಲೀಕರ (Dog owner) ಪತ್ತೆಗೆ ಒತ್ತಡ ಹೆಚ್ಚಳ ಬೆನ್ನಲ್ಲೇ ಇದೀಗ ಮಾಲೀಕ ಶೈಲೇಂದ್ರ ಕುಮಾರ್ರನ್ನು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ನಗರದ ಶಿವಾಲಿ ಚಿತ್ರಮಂದಿರ ಮಾಲೀಕರ ಅಳಿಯ. ಇನ್ನು ಮಹಿಳೆ ಬಲಿ ಪಡೆದಿದ್ದ ಎರಡು ನಾಯಿಗಳು ಸಾವನ್ನಪ್ಪಿವೆ.
ಶ್ವಾನಗಳ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲು ಶಾಸಕ ಕೆಎಸ್ ಬಸವಂತಪ್ಪ ಪೊಲೀಸರಿಗೆ ಸೂಚಿಸಿದ್ದರು. ಆ ಮೂಲಕ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ತನಿಖೆಗೆ ಮುಂದಾಗಿದ್ದರು, ಇದೀಗ ಮಾಲೀಕನ ಬಂಧನವಾಗಿದೆ.
ಬಂಧಿತ ಶೈಲೇಂದ್ರ ಕುಮಾರ್ ಹಲವು ವರ್ಷಗಳಿಂದ ರಾಟ್ ವೀಲರ್ ಶ್ವಾನಗಳನ್ನ ಸಾಕಿದ್ದರು. ಡಿ.5ರಂದು ಶ್ವಾನಗಳನ್ನು ಆಟೋದಲ್ಲಿ ತಂದು ಜಮೀನಿನಲ್ಲಿ ಬಿಟ್ಟುಹೋಗಿದ್ದರು. ಈ ವೇಳೆ ಮಲ್ಲಶೆಟ್ಟಿಹಳ್ಳಿ ನಿವಾಸಿ ಅನಿತಾ(38) ಎಂಬುವವರ ಮೇಲೆ ದಾಳಿ ಮಾಡಿದ್ದವು.
ಮಹಿಳೆ ಬಲಿ ಪಡೆದಿದ್ದ ಎರಡು ರಾಟ್ವೀಲರ್ ನಾಯಿ ಸಾವನ್ನಪ್ಪಿವೆ. ಘಟನೆ ಬಳಿಕ ಗ್ರಾಮಸ್ಥರು ಹಾಗೂ ಹಂದಿ ಹಿಡಿಯುವವರು ಸೇರಿ ನಾಯಿಗಳನ್ನು ಸೆರೆಹಿಡಿಯಲಾಗಿದೆ. ಈ ವೇಳೆ ತೀವ್ರ ಅಟ್ಟಾಡಿಸಿದ್ದರಿಂದ ಆಘಾತಕ್ಕೊಳಗಾಗಿ ನಾಯಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

