ಹೈಕೋರ್ಟ್​ ಮೆಟ್ಟಿಲೇರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು: ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ತ ತವರಿನಲ್ಲಿ ಸೋಲಿಟ್ಟಿದ್ದು, ಇದ್ರ ನಡುವೆ ಆರ್​ಸಿಬಿ ಫ್ರಾಂಚೈಸಿಯೂ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದೆ.

ಇತ್ತೀಚೆಗೆ ಸನ್​ರೈಸರ್ಸ್​ ಹೈದ್ರಾಬಾದ್​ ತಂಡದ ಸ್ಫೋಟಕ ಬ್ಯಾಟ್ಸ್​ಮನ್​ ಓಪನರ್​ ಟ್ರಾವಿಸ್​ ಹೆಡ್ ಅವರು ಜಾಹೀರಾತು ಒಂದರಲ್ಲಿ ನಟಿಸಿದ್ದರು. ಟ್ಯಾಕ್ಸಿ ಕಂಪನಿಯಾದ ಊಬರ್ ಸಂಸ್ಥೆ ಜಾಹೀರಾತಿನಲ್ಲಿ ಆರ್​ಸಿಬಿಯ ಕುರಿತು ಅವಹೇಳನ ಮಾಡಲಾಗಿದೆ ಎಂದು ಹೇಳಲಾಗಿದೆ.

ಊಬರ್ ಕಂಪನಿ ಯೂಟ್ಯೂಬ್​ ಜಾಹೀರಾತು ಒಂದರಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಅವಹೇಳನ ಮಾಡಲಾಗಿದೆ ಎಂದು ಫ್ರಾಂಚೈಸಿ ಆರೋಪ ಮಾಡಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಹೈಕೋರ್ಟ್​​ಗೆ ಆರ್​ಸಿಬಿ ಫ್ರಾಂಚೈಸಿ ಅರ್ಜಿ ಸಲ್ಲಿಕೆ ಮಾಡಿತ್ತು. ಇದನ್ನು ಏಪ್ರಿಲ್ 17 ರಂದು ದೆಹಲಿ ಹೈಕೋರ್ಟ್​ ವಿಚಾರಣೆ ಮಾಡಿದೆ. ನ್ಯಾಯಾಧೀಶ ಸೌರಭ್ ಬ್ಯಾನರ್ಜಿ ಅವರು ಆದೇಶವನ್ನು ಕಾಯ್ದಿರಿಸಿದ್ದಾರೆ.

ಹೈದ್ರಾಬಾದ್​ ತಂಡದ ಸ್ಫೋಟಕ ಬ್ಯಾಟರ್ ಆಗಿರುವ ಟ್ರಾವಿಸ್ ಹೆಡ್ ಅವರು ಬಡ್ಡೀಸ್​ ಇನ್ ಬೆಂಗಳೂರು ಎನ್ನುವ ಯೂಟ್ಯೂಬ್​ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಊಬರ್​ ತಮ್ಮ ಯೂಟ್ಯೂಬ್​ನಲ್ಲಿ ಹಂಚಿಕೊಂಡಿತ್ತು. ವಿಡಿಯೋದಲ್ಲಿ ಸ್ಟೇಡಿಯಂನ ಬೋರ್ಡ್​ನಲ್ಲಿ ಸ್ಟ್ರೇ ಪೈಂಟ್ ಉಪಯೋಗಿಸಿ ಹೆಡ್​, ರಾಯಲ್ಲಿ ಚಾಲೆಂಜ್ಡ್​ ಬೆಂಗಳೂರು ಎಂದು ಚೇಂಜ್ ಮಾಡುತ್ತಾರೆ. ಹೀಗಾಗಿ ತನ್ನ ಟ್ರೇಡ್​ ಮಾರ್ಕ್​ ಘೋಷಣೆಯನ್ನು ಅನಧಿಕೃತವಾಗಿ ಉಪಯೋಗಿಸಲಾಗಿದೆ ಹಾಗೂ ಅದನ್ನು ಸ್ಟ್ರೇ ಪೈಂಟ್ ಬಳಸಿ ವಿರೂಪ ಮಾಡಲಾಗಿದೆ ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ದೆಹಲಿ ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದೆ. ಸದ್ಯ ಈ ಅರ್ಜಿಯ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!