ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಇಂಡಿಯನ್ಸ್ (MI ) ಅತಿಥೇಯ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ 100 ರನ್‌ಗಳ ಬೃಹತ್ ಜಯ ಸಾಧಿಸಿ, 2025ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 217 ರನ್ಗಳಿಸಿತ್ತು. ಈ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 16 ಓವರ್ಗಳಲ್ಲಿ ಆಲೌಟ್ ಆಗುವ ಮೂಲಕ ಸೋಲು ಕಂಡಿತು.
ಆರಂಭ ಆಟಗಾರರಾದ ರೋಹಿತ್ ಶರ್ಮಾ (53, 36ಎ) ಮತ್ತು ರಿಯಾನ್ ರಿಕೆಲ್ಟನ್ (61, 38ಎ) ಆಕರ್ಷಕ ಅರ್ಧಶತಕ ಬಾರಿಸಿದ ನಂತರ ಸೂರ್ಯಕುಮಾರ್ ಯಾದವ್ (ಔಟಾಗದೇ 48, 23ಎ) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (ಔಟಾಗದೇ 48, 23ಎ) ಅವರು ಬಿರುಸಿನ ಆಟವಾಡಿದ್ದರಿಂದ ಮುಂಬೈ 2 ವಿಕೆಟ್‌ಗೆ 217 ರನ್‌ಗಳ ಉತ್ತಮ ಮೊತ್ತ ಗಳಿಸಿತು.
RR ನ ಆರಂಭಿಕ ಆಟಗಾರರಾದ ವೈಭವ್ ಸೂರ್ಯವಂಶಿ ಇಂದು ಖಾತೆ ತೆರೆಯುವ ಮುನ್ನವೇ ದೀಪಕ್ ಚಾಹರ್ ಬೌಲಿಂಗ್ನಲ್ಲಿ ಔಟ್ ಆದರು. ಮತ್ತೊಬ್ಬ ಸ್ಫೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 2ನೇ ಓವರ್ನಲ್ಲಿ ಟ್ರೆಂಟ್ ಬೌಲ್ಡ್ ಬೌಲಿಂಗ್ನಲ್ಲಿ 2 ಸಿಕ್ಸರ್ ಸಿಡಿಸಿ ಅದೇ ಓವರ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ನಿತೀಶ್ ರಾಣಾ 9 ರನ್ಗಳಿಸಿ ಬೌಲ್ಟ್ಗೆ 2ನೇ ಬಲಿಯಾದರೆ, ಜಸ್ಪ್ರೀತ್ ಬುಮ್ರಾ ಎಸೆದ 5ನೇ ಓವರ್ನಲ್ಲಿ ಸತತ ಎರಡು ಎಸೆತಗಳಲ್ಲಿ ನಾಯಕ ರಿಯಾನ್ ಪರಾಗ್ (16) ಹಾಗೂ ಶಿಮ್ರಾನ್ ಹೆಟ್ಮೇಯರ್ (0) ವಿಕೆಟ್ ಪಡೆದು ರಾಜಸ್ಥಾನ್ ತಂಡ ಚೇತರಿಸಿಕೊಳ್ಳದಂತಹ ಆಘಾತ ನೀಡಿದರು.