ದಿಗಂತ ವರದಿ ಕೊಪ್ಪಳ:
ವರ್ಗಾವಣೆ ದಂಧೆಯಾಗಿದೆ ಎಂದು ಹೇಳಿದ್ದ ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರು ವರ್ಗಾವಣೆ ಸಂಬಂಧ ಪತ್ರ ಕೊಡುವ ಮೂಲಕ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಆರೋಪಿಸಿದರು.
ಈ ಕುರಿತು ಪ್ರಕಟಣೆ ನೀಡಿದ ಅವರು, ಹೊಸದಿಗಂತ ಪತ್ರಿಕೆಯಲ್ಲಿ ಅಧಿಕಾರಿಯ ವರ್ಗಾವಣೆಗೆ ರಾಯರೆಡ್ಡಿ ಪತ್ರ ನೀಡಿರುವ ಬಗ್ಗೆ ವರದಿ ಪ್ರಕಟವಾಗಿದೆ. ಯಾವುದನ್ನು ಮಾತನಾಡುತ್ತೇವೆಯೋ ಅದೇ ರೀತಿ ನಡೆದುಕೊಳ್ಳಬೇಕು. ಹಿಂದಿನ ಹಾಗೂ ಇಂದಿನ ಸರ್ಕಾರದಲ್ಲಿ ವರ್ಗಾವಣೆ ದಂಧೆ ಇತ್ತು ಎಂದು ಹೇಳಿಕೆ ನೀಡಿ ವರ್ಗಾವಣೆ ಗೆ ಪತ್ರ ನೀಡಿರುವುದು ಎಷ್ಟು ಸರಿ? ವರ್ಗಾವಣೆ ಯಲ್ಲಿ ಸರ್ಕಾರ ಭಾಗಿಯಾಗಿದೆ. ಇದರಲ್ಲಿ ರಾಯರೆಡ್ಡಿ ಕೂಡ ಇದ್ದಾರೆ ಎಂದರು.