ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನ ಅಂಗಳದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಸೆಣಸಾಡಲಿದೆ. ಕಳೆದ ಬಾರಿ ಆಕ್ರಮಣಕಾರಿ ಆಟದ ಮೂಲಕವೇ ಎದುರಾಳಿಗಳ ನಿದ್ದೆಗೆಡಿಸಿದ್ದ ಸನ್ ರೈಸರ್ಸ್ ಈಬಾರಿ ಮತ್ತಷ್ಟು ಸ್ಪೋಟಕ ಆಟವಾಡುವ ಕಾತರದಲ್ಲಿದೆ.
ಹೈದರಾಬಾದ್ ಕಳೆದ ವರ್ಷ 3 ಬಾರಿ 250 + ರನ್ ಗಳಿಸಿದ್ದು, ಈ ಸಲ 300 + ರನ್ ಕಲೆಹಾಕುವ ಗುರಿ ಹೊಂದಿದೆ. ಬ್ಯಾಟಿಂಗ್ ಸ್ನೇಹಿ ತವರಿನ ಪಿಚ್ ನಲ್ಲಿ ನಡೆಯಲಿರುವ ಆರಂಭಿಕ ಪಂದ್ಯದಲ್ಲೇ ಗುರಿ ಸಾಧಿಸುವ ನಿರೀಕ್ಷೆಯಲ್ಲಿದೆ.
ಸನ್ ರೈಸರ್ಸ್ ಹೈದ್ರಾಬಾದ್ ತಂಡ: ಟ್ರ್ಯಾವಿಸ್ ಹೆಡ್, ಅಭಿಷೇಕ್, ಇಶಾನ್, ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್, ನಿತೀಶ್, ಕಮಿನ್ಸ್ (ನಾಯಕ), ಹರ್ಷಲ್ /ಉನಾಟ್, ರಾಹುಲ್ ಚಹರ್, ಶಮಿ, ಝಂಪಾ.
ರಾಜಸ್ಥಾನ ರಾಯಲ್ಸ್ ತಂಡ: ಯಶಸ್ವಿ ಜೈಸ್ವಾಲ್, ಸ್ಯಾಟ್ಸನ್, ನಿತೀಶ್, ರಿಯಾನ್ (ನಾಯಕ), ಧ್ರುವ್‌ಜುರೆಲ್, ಹೆಟ್ಟೇಯರ್, ಹಸರಂಗ, ಶುಭಂ/ಆಕಾಶ್, ಆರ್ಚರ್, ತೀಕ್ಷಣ/ಫಾರೂಖಿ, ಸಂದೀಪ್, ತುಷಾರ್.