ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಕರ್ ಪ್ರಶಸ್ತಿ ವಿಜೇತ ಆರ್ಆರ್ಆರ್ ಸಿನಿಮಾದಲ್ಲಿ ಖಡಕ್ ಬ್ರಿಟಷ್ ಅಧಿಕಾರಿಯಾಗಿ ನಟಿಸಿದ್ದ ರೇ ಸ್ಟೀವನ್ಸನ್ ಅವರು 58 ನೇ ವಯಸ್ಸಿನಲ್ಲಿ ಇಟಲಿಯಲ್ಲಿ ಮೃತಪಟ್ಟಿದ್ದಾರೆ.
ಆರ್ಆರ್ಆರ್ ಸಿನಿಮಾ ತಂಡ ಈ ಕುರಿತು ತನ್ನ ಟ್ವಿಟರ್ ಖಾತೆಯಲ್ಲಿ ಸಂತಾಪ ಸೂಚಿಸಿದೆ. ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿರುವ ನಿರ್ದೇಶಕ ಎಸ್.ಎಸ್.ರಾಜಮೌಳಿ ಆ್ಯಕ್ಷನ್ ಕಟ್ನಲ್ಲಿ ಮೂಡಿಬಂದ ಆರ್ಆರ್ಆರ್ ಸಿನಿಮಾದಲ್ಲಿ ಸ್ಟೀವನ್ಸನ್ ಬ್ರಿಟಿಷ್ ಅಧಿಕಾರಿ ಪಾತ್ರ ಪೋಷಣೆ ಮಾಡಿದ್ದರು. ಅವರ ಅಭಿನಯಕ್ಕಾಗಿ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾದಲ್ಲಿ ಖಳ ನಾಯಕನ ಪಾತ್ರದ ಮೂಲಕ ಭಾರತೀಯ ಸಿನಿಮಾರಂಗಕ್ಕೆ ಅವರು ಪದಾರ್ಪಣೆ ಮಾಡಿದ್ದರು.
ಉತ್ತಮ ನಟರಾಗಿದ್ದ ಸ್ಟೀವನ್ಸನ್ ಅವರು, ಮಾರ್ವೆಲ್ನ ‘ಥಾರ್’ ಸರಣಿಯಲ್ಲಿ ವೋಲ್ಟಾಗ್, ‘ವೈಕಿಂಗ್ಸ್’ ನಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ಅನಿಮೇಟೆಡ್ ಸ್ಟಾರ್ ವಾರ್ಸ್ ಸರಣಿಯಾದ ‘ದಿ ಕ್ಲೋನ್ ವಾರ್ಸ್’ ಮತ್ತು ‘ರೆಬೆಲ್ಸ್’ನಲ್ಲಿ ಗಾರ್ ಸ್ಯಾಕ್ಸನ್ಗೆ ಧ್ವನಿ ಕೂಡ ನೀಡಿದ್ದರು. ಡಿಸ್ನಿ+ ನಲ್ಲಿ ಮುಂಬರುವ ‘ದಿ ಮ್ಯಾಂಡಲೋರಿಯನ್ ಸ್ಪಿನ್ಆಫ್ ಅಶೋಕಾ’ದಲ್ಲಿ ರೊಸಾರಿಯೊ ಡಾಸನ್ ಪಾತ್ರದಲ್ಲಿ ಅವರು ನಟಿಸಿದ್ದಾರೆ.