ಅಮೆರಿಕದಲ್ಲಿ ಆರ್‌ಆರ್‌ಆರ್‌ ಗ್ರ್ಯಾಂಡ್ ರೀ ರಿಲೀಸ್: ಏಕಕಾಲಕ್ಕೆ 200 ಚಿತ್ರಮಂದಿರಗಳಲ್ಲಿ ಅಬ್ಬರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಮೌಳಿ ನಿರ್ದೇಶನದ ರಾಮ್ ಚರಣ್ ಮತ್ತು ಎನ್.ಟಿ.ಆರ್ ಅಭಿನಯದ ಅದ್ಧೂರಿ ಮಲ್ಟಿಸ್ಟಾರರ್ ಸಿನಿಮಾ RRR ವಿಶ್ವದಾದ್ಯಂತ ಭರ್ಜರಿ ಯಶಸ್ಸು ಕಂಡಿದ್ದು ಗೊತ್ತೇ ಇದೆ. ವಿಶ್ವದಾದ್ಯಂತ ಪ್ರೇಕ್ಷಕರು ಮತ್ತು ಸೆಲೆಬ್ರಿಟಿಗಳು ಈ ಚಿತ್ರವನ್ನು ಪ್ರಶಂಸಿಸುತ್ತಲೇ ಇದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳು ಬಂದಿವೆ. ನಾಟು ನಾಟು ಹಾಡು ಆಸ್ಕರ್ ಪಟ್ಟಿಯಲ್ಲಿ ಉಳಿದು ಹೊಸ ಇತಿಹಾಸ ಸೃಷ್ಟಿಸಿದೆ.

ಇದರ ಭಾಗವಾಗಿ ಅಮೆರಿಕದಲ್ಲಿ ಹಲವು ಥಿಯೇಟರ್ ಗಳಲ್ಲಿ ಹಾಗೂ ಸ್ಪೆಷಲ್ ಶೋಗಳಲ್ಲಿ ಬಿಡುಗಡೆಯಾಗಿರುವ ಆರ್ ಆರ್ ಆರ್ ಸಿನಿಮಾ ಇದೀಗ ಶೀಘ್ರದಲ್ಲೇ ಅಮೆರಿಕದಾದ್ಯಂತ ರೀ-ರಿಲೀಸ್ ಆಗಲಿದೆ. ಆಸ್ಕರ್ ಪ್ರಶಸ್ತಿಗೆ ಇನ್ನೆರಡು ವಾರ ಬಾಕಿ ಇರುವ ಕಾರಣ ರಾಜಮೌಳಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ. RRR ಸಿನಿಮಾ ಮಾರ್ಚ್ 3 ರಂದು ಅಮೆರಿಕಾದಲ್ಲಿ ಮರು ಬಿಡುಗಡೆ ಆಗಲಿದೆ. ಈ ಮರು ಬಿಡುಗಡೆ ಏಕಕಾಲಕ್ಕೆ 200 ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ.

ಚರಣ್ ಈಗಾಗಲೇ ಅಮೆರಿಕದಲ್ಲಿದ್ದಾರೆ. ಕೀರವಾಣಿ, ಚಂದ್ರಬೋಸ್ ಮತ್ತು ರಾಜಮೌಳಿ ಇತ್ತೀಚೆಗೆ ಮತ್ತೆ ಅಮೆರಿಕಕ್ಕೆ ಹೋಗಿದ್ದರು. ಶೀಘ್ರದಲ್ಲೇ ಎನ್ ಟಿಆರ್ ಕೂಡ ಹೋಗಲಿದ್ದಾರೆ. ಆಸ್ಕರ್ ಸಮಾರಂಭದಲ್ಲಿ ಇಡೀ ಚಿತ್ರತಂಡ ಭಾಗವಹಿಸಲಿದೆ ಎಂದು ಸಿನಿ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!