ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದಯೋನ್ಮುಖ ನವ ಉದ್ಯಮಿಗಳ ಬೆಳವಣಿಗೆಯನ್ನು ಉತ್ತೇಜಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮತ್ತೊಂದು ಸುತ್ತಿನ ಸ್ಟಾರ್ಟ್‌ಅಪ್‌ಗಳಿಗೆ ನಿಧಿಗಳ ಯೋಜನೆ ಘೋಷಿಸಿದ್ದಾರೆ.
ಸರ್ಕಾರವು ಸ್ಟಾರ್ಟ್‌ಅಪ್‌ಗಳ ಮೂಲಕ ನಾವೀನ್ಯತೆಯನ್ನು ಉತ್ತೇಜಿಸುವತ್ತ ಗಮನಹರಿಸುತ್ತಿರುವುದರಿಂದ ಈ ಘೋಷಣೆ ಮಹತ್ವದ್ದಾಗಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಇದುವರೆಗೆ 1.5 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿದೆ. ಜನವರಿ 16, 2016 ರಂದು ಸ್ಟಾರ್ಟ್‌ಅಪ್ ಇಂಡಿಯಾಕ್ಕಾಗಿ ಕ್ರಿಯಾ ಯೋಜನೆಯನ್ನು ಅನಾವರಣಗೊಳಿಸಲಾಗಿತ್ತು.
ಇದೀಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಟಾರ್ಟಪ್ ಗಳಿಗೆ 10 ಸಾವಿರ ಕೋಟಿ ರೂ.ಗಳ ನಿಧಿ ಯೋಜನೆ ಘೋಷಿಸಿದ್ದಾರೆ. ಇಂದು ದೆಹಲಿಯಲ್ಲಿ ನಡೆದ ಕೇಂದ್ರ ಬಜೆಟ್ ಮಂಡನೆಯಲ್ಲಿ ನವ ಉದ್ಯಮಿಗಳ ಬೆಳವಣಿಗೆಯನ್ನು ಉತ್ತೇಜಿಸಲು ನಿರ್ಮಲಾ ಸೀತಾರಾಮನ್ ಈ ಯೋಜನೆ ಘೋಷಣೆ ಮಾಡಿದರು. 10,000 ಕೋಟಿ ರೂಪಾಯಿಗಳ ಹೊಸ ಮತ್ತು ವಿಸ್ತೃತ ವ್ಯಾಪ್ತಿಯನ್ನು ಹೊಂದಿರುವ ಹೊಸ ನಿಧಿಗಳ ನಿಧಿ ಅನ್ನು ಸ್ಥಾಪಿಸುವುದಾಗಿ ಘೋಷಿಸಿದರು.
10,000 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಸರ್ಕಾರ ಘೋಷಿಸಿದ ಆರಂಭಿಕ ಹೊಸ ನಿಧಿಗಳ ನಿಧಿ, 91,000 ಕೋಟಿ ರೂಪಾಯಿಗಳ ಬದ್ಧತೆಯನ್ನು ವೇಗವರ್ಧಿಸುವಲ್ಲಿ ಯಶಸ್ವಿಯಾಯಿತು ಎಂದು ಸಚಿವೆ ನಿರ್ಮಲಾ ಹೇಳಿದರು.