Monday, October 2, 2023

Latest Posts

ಬೆಳಗ್ಗೆ ಕೋಟ್ಯಂತರ ರೂ. ಕೊಟ್ಟು ಕಾರು ಖರೀದಿ ಮಾಡಿದ ಉದ್ಯಮಿ, ಸಂಜೆ ಭೀಕರ ಅಪಘಾತದಲ್ಲಿ ಪ್ರಾಣಬಿಟ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗ್ಗೆ ಕೋಟ್ಯಂತರ ರೂಪಾಯಿ ನೀಡಿ ವಫೆರಾರಿ 488 ಕಾರು ಖರೀದಿ ಮಾಡಿದ ಉದ್ಯಮಿ, ಸಂಜೆ ಅದರಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ಭೀಕರ ಅಪಘಾತಕ್ಕೊಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಹೌದು, ಗ್ರೀಸ್​​ನ ರಾಜಧಾನಿ ಅಥೆನ್ಸ್​​ನ ವೌಲಾದಲ್ಲಿ ಈ ದುರ್ಘಟನೆ ನಡೆದಿದ್ದು, ಉದ್ಯಮಿ ಟ್ಜೋರ್ಟ್​ಜಿಸ್​ ಮೊನೊಯಿಯೊಸ್​​(45) ಅಪಘಾತದ ವೇಳೆ ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ 3 ಕೋಟಿಗೂ ಅಧಿಕ ಮೌಲ್ಯದ ಸ್ಪೋರ್ಟ್ಸ್ ಕಾರು ಫೆರಾರಿ ಖರೀದಿ ಮಾಡಿದ್ದ ಉದ್ಯಮಿ ಸಂಜೆ ವೇಳೆ ಹೆಂಡತಿ ಜೊತೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಮರಕ್ಕೆ ಗುದ್ದಿದೆ. ಪರಿಣಾಮ ಉದ್ಯಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಉದ್ಯಮಿ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!