ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಉತ್ತೇಜಿಸುವ ಸಂಸ್ಥೆ ಆರ್‌ಎಸ್‍ಎಸ್: ರವೀಂದ್ರ ಜಡೇಜಾ ಮೆಚ್ಚುಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಆರ್‌ಎಸ್‍ಎಸ್ ಮತ್ತು ಅದರ ಸಿದ್ಧಾಂತಗಳು ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ ಎಂದು ಟೀಂ ಇಂಡಿಯದ ಆಲ್‌ರೌಂಡರ್‌ ಆಟಗಾರ ರವೀಂದ್ರ ಜಡೇಜಾ ಮುಕ್ತ ಕಂಠದಿಂದ ಹೊಗಳಿದ್ದಾರೆ.

ಗುಜರಾತ್‍ ಚುನಾವಣೆಯಲ್ಲಿ ಗೆದ್ದಿರುವ ಪತ್ನಿ ರಿವಾಬಾ ವಿಡಿಯೋವನ್ನು ಟ್ವೀಟ್‌ ಮಾಡಿ ಜಡೇಜಾ ಆರ್‌ಎಸ್‌ಎಸ್‌(RSS) ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರ್‌ಎಸ್‌ಎಸ್ ಬಗ್ಗೆ ನಿಮ್ಮ ಜ್ಞಾನವನ್ನು ನೋಡಿ ತುಂಬಾ ಸಂತೋಷವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ನಮ್ಮ ಸಮಾಜದ ಮೌಲ್ಯಗಳನ್ನು ಎತ್ತಿಹಿಡಿಯುವ ಆದರ್ಶಗಳನ್ನು ಉತ್ತೇಜಿಸುವ ಸಂಸ್ಥೆ. ನಿಮ್ಮ ಜ್ಞಾನ ಮತ್ತು ಕಠಿಣ ಪರಿಶ್ರಮವೇ ನಿಮ್ಮನ್ನು ಪ್ರತ್ಯೇಕಿಸುತ್ತದೆ. ಇದನ್ನು ಮುಂದುವರಿಸಿ ಎಂದು ಜಡೇಜಾ ಪತ್ನಿಯ ಮಾತಿಗೆ ಚಪ್ಪಾಳೆ ತಟ್ಟಿದ್ದಾರೆ.

ವಿಡಿಯೋದಲ್ಲಿ ಪತ್ರಕರ್ತರೊಬ್ಬರು ಆರ್‌ಎಸ್‍ಎಸ್ ಬಗ್ಗೆ ರಿವಾಬಾ ಜಡೇಜಾಗೆ ಪ್ರಶ್ನಿಸಿದ್ದಾಗ ಉತ್ತರಿಸಿದ್ದ ರಿವಾಬಾ, ಆರ್‌ಎಸ್‍ಎಸ್ ಬಿಜೆಪಿಯ ತೊಟ್ಟಿಲು. ವಿಶ್ವದ ಅತಿದೊಡ್ಡ ಸ್ವಾಯತ್ತ ಸಂಸ್ಥೆ. ರಾಷ್ಟ್ರೀಯತೆ, ದೇಶಭಕ್ತಿ, ದೇಶಪ್ರೇಮ, ಸಂಘಟನೆ, ಏಕತೆ, ತ್ಯಾಗವನ್ನು ಒಟ್ಟುಗೂಡಿಸುವ ಸಂಸ್ಥೆ ಆರ್‍ಎಸ್‍ಎಸ್ ಎಂದಿದ್ದರು. ಈ ಉತ್ತರ ಕೇಳಿ ಇಡೀ ಸಭಾಂಗಣವೇ ಚಪ್ಪಾಳೆ ತಟ್ಟುವ ಮೂಲಕ ಪ್ರತಿಧ್ವನಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!