ಸಮಾಜದಲ್ಲಿ ಸಾಮಾಜಿಕ ಸಾಮರಸ್ಯದ ಸದ್ಭಾವನೆ ಬೆಳೆಯಲು ಆರ್ ಎಸ್ ಎಸ್ ಸಹಕಾರಿ: ನಾ. ಸೀತಾರಾಮ್

ಹೊಸ ದಿಗಂತ ವರದಿ, ಅರಸೀಕೆರೆ :

ಭಾರತೀಯ ಸನಾತನ ಹಿಂದು ಸಂಸ್ಕೃತಿಯ ಕೌಟoಬಿಕ ಪದ್ಧತಿಯ ಮಾನವೀಯ ಮೌಲ್ಯಗಳಿಂದ ಕೂಡಿರುವ ಕಾರಣ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯದ ಸದ್ಭಾವನೆ ಬೆಳೆಯಲು ಆರ್. ಎಸ್. ಎಸ್ ಸಹಕಾರಿಯಾಗಿದೆ ಎಂದು ಆರ್. ಎಸ್. ಎಸ್ ದಕ್ಷಿಣ ಪ್ರಾಂತ ಸೇವಾ ಪ್ರಮುಖ ನಾ. ಸೀತಾರಾಮ್ ತಿಳಿಸಿದರು.

ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ವಿಜಯದಶಮಿ ಅಂಗವಾಗಿ, ಅಯೋಜಿಸಿದ್ದ ಪಥಸಂಚಲನ ನಂತರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 99 ವರ್ಷಗಳ ಹಿಂದೆ ಡಾ. ಕೇಶವ ಬಲರಾಮ ಹೆಡೆಗೇವಾರ ಅವರು ಕಟ್ಟಿದಂತ ರಾಷ್ಟ್ರೀಯ ಸ್ವಯಂಸೇವಕ ಸಂಘವು ಜಗತ್ತಿನ ಅತ್ಯಂತ ದೊಡ್ಡ ಸಂಘಟನೆಯಾಗಿದೆ. ಜ್ಞಾನ ಮತ್ತು ವಿಜ್ಞಾನಗಳ ಪ್ರತೀಕವಾಗಿರುವ ಸನಾತನ ಹಿಂದು ಧರ್ಮ ಸಾವಿರಾರು ವರ್ಷಗಳ ಕಾಲ ಪರಕೀಯರ ಅಳ್ವಿಕೆಯಲ್ಲಿ ಅನೇಕ ನೋವುಗಳನ್ನ ಅನುಭವಿಸಿದ್ದರು. ಇಂದು ಭಾರತ ವಿಶ್ವ ಮಾನ್ಯತೆ ಯನ್ನು ಪಡೆಯಲು ಇಲ್ಲಿನ ಉದಾತ ಸಂಸ್ಕೃತಿ, ಮಾನವೀಯ ಮೌಲ್ಯಗಳು ಕಾರಣವಾಗಿದೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲ ಉದ್ದೇಶವೇ ರಾಷ್ಟ್ರದ ಹಿತಾಸಕ್ತಿ ಕಾಪಾಡುವುದು. ಜೊತೆಗೆ ಸಾಮಾಜದ ಕಟ್ಟಕಡೆ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಬೇಕು ಎಂಬ ದೃಢ ಸಂಕಲ್ಪವಾಗಿದೆ. ಹಿಂದು ಸಾಮಾಜ ಅತ್ಯಂತ ಸಹನೆ, ತಾಳ್ಮೆಯದ್ದಾಗಿದೆ. ಅದರೆ, ಅದು ದೌರ್ಬಲ್ಯವಲ್ಲ, ಸಾದಿಸಿದ ತಾಯಿ ದುರ್ಗೆಯನ್ನು ನಾವುಗಳು ಸದಾ ಸ್ಮರಿಸುತ್ತೇವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಿಸ್ತು ಬದ್ದ ಪ್ರೇಮಿ ಸಂಘಟನೆಯಗಿದ್ದು, ಯುದ್ಧಕಾಲದಲ್ಲಿ ಭಾರತೀಯ ಸೈನಿಕರಿಗೆ ಸಹಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾಕೃತಿಕ ವಿಪತ್ತಿನ ವೇಳೆ ಸ್ವಯಂ ಸೇವಕರು ಶಕ್ತಿ ಮೀರಿ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಸರ್ಕಾರ ಹಾಗೂ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ ಸೇವಾ ಕಾರ್ಯ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಾಸನ ಇಸ್ರೋ ನಂದಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!