370ನೇ ವಿಧಿ ಕುರಿತ ಸುಪ್ರೀಂ ತೀರ್ಪಿಗೆ ಆರೆಸ್ಸೆಸ್ ಹರ್ಷ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿರುವ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ಮಾನ್ಯತೆ ನೀಡಿರುವುದು ಸ್ವಾಗತಾರ್ಹ ಎಂದು ರಾಷ್ಟ್ರೀಯ ಸ್ವಯಂಸೇವಕಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಸುನೀಲ ಅಂಬೇಕರ್ ಪ್ರತಿಕ್ರಿಯಿಸಿದ್ದಾರೆ.

“ಆರೆಸ್ಸೆಸ್ ಪ್ರಾರಂಭದಿಂದಲೂ 370ನೇ ವಿಧಿಯನ್ನು ವಿರೋಧಿಸುತ್ತಲೇ ಬಂದಿತ್ತು. ಇದರ ವಿರುದ್ಧ ಅನೇಕ ಪ್ರಸ್ತಾವಗಳನ್ನು ಸಹ ಕಾಲ-ಕಾಲಕ್ಕೆ ಅಂಗೀಕರಿಸಿತ್ತು. 370ನೇ ವಿಧಿಯನ್ನು ರದ್ದುಗೊಳಿಸುವಂತೆ ಆಗ್ರಹಿಸುವ ಆಂದೋಲನದಲ್ಲೂ ಸಂಘವು ಮುಂಚೂಣಿಯಲ್ಲಿತ್ತು. ಈಗ ಬಂದಿರುವ ತೀರ್ಪು ರಾಷ್ಟ್ರೀಯ ಏಕತೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ. 370ನೇ ವಿಧಿಯ ಕಾರಣದಿಂದ ಹಲವಾರು ವರ್ಷಗಳಿಂದ ಅನ್ಯಾಯಕ್ಕೆ ಒಳಗಾಗಿದ್ದ ಅಲ್ಲಿನ ಜನರಿಗೆ ಈಗ ಮುಕ್ತಿ ದೊರೆತಿದೆ” ಎಂದು ಅಂಬೇಕರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!