RSS ಮುಖಂಡ ಶ್ರೀನಿವಾಸನ್ ಹತ್ಯೆ ಪ್ರಕರಣ: NIA ಯಿಂದ ಪ್ರಮುಖ ಆರೋಪಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ 2022ರಲ್ಲಿ ಆರ್‌ಎಸ್‌ಎಸ್ ಮುಖಂಡ ಶ್ರೀನಿವಾಸನ್ ಅವರ ಭೀಕರ ಹತ್ಯೆಗೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯನಾಗಿರುವ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.

ಆರೋಪಿ ಮಲಪ್ಪುರಂ ಜಿಲ್ಲೆಯ ನಿವಾಸಿಯಾಗಿರುವ ಶಫೀಖ್‌ ಎಂದು ಗುರುತಿಸಲಾಗಿದೆ. ಈತ 2022ರ ಏಪ್ರಿಲ್‌ 16ರಂದು ಪಾಲಕ್ಕಾಡ್‌ನಲ್ಲಿ ಶ್ರೀನಿವಾಸನ್‌ ಹತ್ಯೆಯ ನಂತರ ತಲೆಮರೆಸಿಕೊಂಡಿದ್ದನು. ಇದೀಗ ಎನ್‌ಐಎ ಅಧಿಕಾರಿಗಳ ತಂಡ ಕೊಲ್ಲಂ ಜಿಲ್ಲೆಗೆ ಪತ್ತೆಹಚ್ಚಿದೆ.

ಶ್ರೀನಿವಾಸನ್ ಕೊಲೆ ಪ್ರಕರಣದಲ್ಲಿ ಒಟ್ಟು 71 ಮಂದಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಈ ಸಂಬಂಧ NIA ಈಗಾಗಲೇ 2023 ರ ಮಾರ್ಚ್‌ 17 ಮತ್ತು 2023ರ ನವೆಂಬರ್‌ 6 ರಂದು ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ. ಆರೋಪಿಗಳಲ್ಲಿ ಒಬ್ಬನನ್ನು ಅಬ್ದುಲ್ ನಾಸರ್ ಎಂದು ಗುರುತಿಸಲಾಗಿದ್ದು, ಈತ ಜನವರಿ 2 ರಂದು ಸಾವನ್ನಪ್ಪಿದ್ದಾನೆ. ಸಹೀರ್ ಕೆವಿ ಮತ್ತು ಜಾಫರ್ ಭೀಮಂತವಿಡ ಎಂಬಿಬ್ಬರು ಪರಾರಿಯಾಗಿದ್ದು, ಬಳಿಕ ಇಬ್ಬರನ್ನು ಬಂಧಿಸಲಾಯಿತು.

2022ರ ಏಪ್ರಿಲ್ 16 ರಂದು ಶ್ರೀನಿವಾಸನ್ ಹತ್ಯೆ ನಡೆದಿತ್ತು. ಮೂರು ಬೈಕ್‌ಗಳಲ್ಲಿ ಬಂದ ಮಾರಕಾಯುಧ ಹೊಂದಿದ್ದ ಆರು ಮಂದಿಯ ತಂಡ ಪಾಲಕ್ಕಾಡ್‌ನಲ್ಲಿ ಶ್ರೀನಿವಾಸನ್ ಅವರನ್ನು ಕೊಲೆಗೈದಿತ್ತು. ಸ್ಥಳೀಯ ಪೊಲೀಸರ ವಿಶೇಷ ತಂಡದಿಂದ ಆರಂಭವಾಗಿದ್ದ ತನಿಖೆಯನ್ನು ಬಳಿಕ ಎನ್‌ಐಎಗೆ ವಹಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!