ಶಿವಮೊಗ್ಗದಲ್ಲಿ ವರ್ಷಧಾರೆಯ ನಡುವೆ ನಡೆದ ಆರ್‌ಎಸ್‌ಎಸ್‌ ಪಥಸಂಚಲನ

ಹೊಸದಿಗಂತ ವರದಿ ಶಿವಮೊಗ್ಗ :

ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ನಗರದ ಮೈನ್ ಮಿಡ್ಲ್ ಸ್ಕೂಲ್ ಆವರಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನಿರಂತರ ಮಳೆಯಲ್ಲಿಯೇ ಭಾನುವಾರ ಬೆಳಗ್ಗೆ ಪಥಸಂಚಲನ ನಡೆಸಲಾಯಿತು.

ಬೆಳಗ್ಗೆ 7:30ಕ್ಕೆ ಪಥಸಂಚಲನ ನಿಗದಿಯಾಗಿತ್ತು. ಆದರೆ ಮಳೆ ಜೋರಾಗಿತ್ತು. ಗಣವೇಷಧಾರಿಗಳು ನಿಗದಿತ ಸ್ಥಳಕ್ಕೆ ಆಗಮಿಸಿದ್ದರು. ಆದರೆ ಮಳೆ ಬಿಡುವು ನೀಡದ ಕಾರಣ ಸ್ವಲ್ಪ ಸಮಯ ಕಾಯಬೇಕಿತ್ತು. ಆದರೂ ಮಳೆ ನಿಲ್ಲದ ಕಾರಣ, ಮಳೆಯಲ್ಲಿಯೇ ಪಥಸಂಚಲನ ಆರಂಭಿಸಲಾಯಿತು.

ಘೋಷ್ ನಾದಕ್ಕೆ ಗಣವೇಷಧಾರಿಗಳು‌ ಹೆಜ್ಜೆ ಹಾಕಿದರಾದರೂ‌ ನಿರಂತರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಸಂಪೂರ್ಣ ತೊಯ್ದರೂ ಲೆಕ್ಕಿಸದೆ ಮುಂದುವರಿಯಲಾಯಿತು. ಮಕ್ಕಳು‌ ಹಾಗೂ ವಯೋವೃದ್ಧ ಸ್ವಯಂ ಸೇವಕರು ಚಳಿಯನ್ನು‌ ಲೆಕ್ಕಿಸದೆ ಪಥಸಂಚಲನ‌ ಸಂಪನ್ನಗೊಳಿಸಿದ್ದು ವಿಶೇಷವಾಗಿತ್ತು. ಬಳಿಕ‌ ಮೈಲಾರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬೌದ್ದಿಕ್ ನಡೆಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!