ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸುದೀಪ ತಾಯಿ ಸರೋಜಾ ಅವರು ನ್ಯುಮೋನಿಯಾದಿಂದ ಇಂದು ಮೃತಪಟ್ಟಿದ್ದು, ಸಿನಿ ಸೆಲೆಬ್ರಿಟಿಗಳು ಅಂತಿಮ ದರುಶನಕ್ಕೆ ಆಗಮಿಸಿದ್ದಾರೆ.
ಇದೀಗ ನಟ ಧ್ರುವ ಸರ್ಜಾ ಮತ್ತು ಗಣೇಶ್ ಅವರು ಜೆಪಿ ನಗರದ ನಟನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್ ಅವರು ಸುದೀಪ್ ತಾಯಿ ಸರೋಜಾ ಅವರ ಅಂತಿಮ ದರ್ಶನ ಪಡೆದಿದ್ದಾರೆ.
ರಾಕ್‌ಲೈನ್ ವೆಂಕಟೇಶ್, ಉಮಾಪತಿ ಶ್ರೀನಿವಾಸ್, ಶ್ರೀನಗರ ಕಿಟ್ಟಿ, ಜೈ ಜಗದೀಶ್ ದಂಪತಿ, ಸುಂದರ ರಾಜ್, ಇಂದ್ರಜಿತ್ ಲಂಕೇಶ್, ಕೀರ್ತಿ ರಾಜ್, ಹೇಮಾ ಚೌಧರಿ ಸೇರಿದಂತೆ ಅನೇಕರು ಸರೋಜಾ ಅವರ ಅಂತಿಮ ದರ್ಶನ ಪಡೆದರು.