ಇಂಚಗೇರಿ ಮಠಕ್ಕೆ ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಭೇಟಿ

ಹೊಸದಿಗಂತ ವರದಿ,ವಿಜಯಪುರ:

ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಗುರುವಾರ ಭೇಟಿ ನೀಡಿ, ಮಠದ ರೇವಣಸಿದ್ಧೇಶ್ವರ ಶ್ರೀಗಳಿಂದ ಆಶೀರ್ವಾದ ಪಡೆದರು.

ಕಳೆದ ನಾಲ್ಕು ದಿನಗಳಿಂದ ವಿಜಯಪುರದಲ್ಲಿ ಬೀಡು ಬಿಟ್ಟಿರುವ ಮೋಹನ್ ಭಾಗವತ್ ಇಂಚಗೇರಿ ಸಾಂಪ್ರದಾಯದ ಶಿಷ್ಯರಾಗಿದ್ದು, ಇಂಚಗೇರಿ ಮಠದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸ್ವಾತಂತ್ರ‍್ಯ ಸೇನಾನಿ ಮಾಧವಾನಂದ ಶ್ರೀಗಳ ದೇಗುಲ ಹಾಗೂ ಮಠದ 9 ಗುರುಗಳ ಗದ್ದುಗೆ ದರುಶನ ಪಡೆದರು.

ರೇವಣಸಿದ್ಧೇಶ್ವರ ಶ್ರೀಗಳಿಂದ ಭಾಗವತ್‌ಗೆ ರಾಣಡೆ ಅವರ ಗುರುಗಳಾದ ಭಾಹಸಾಹೇಬ್ ಮಹಾರಾಜರ ಭಾವಚಿತ್ರ ನೀಡಿ ಸನ್ಮಾನಿಸಿದ ಬಳಿಕ, ಶ್ರೀಗಳ ಜೊತೆಗೆ ಕೆಲಕಾಲ ಚರ್ಚಿಸಿದರು.
ಅನಂತರ ಇಂಚಗೇರಿ ಸಾಂಪ್ರದಾಯದ ನಿಂಬರಗಿ, ಮಹಾರಾಷ್ಟ್ರದ ಉಮದಿ ಆಶ್ರಮಗಳತ್ತ ಪ್ರಯಾಣ ಬೆಳೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!