ನೈಸರ್ಗಿಕವಾಗಿ ಬೆಳೆಯುವ ಈ ಅಣಬೆಗೆ ಸಖತ್ ಡಿಮ್ಯಾಂಡು, ಬೆರಗಾಗುವ ಬೆಲೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಅಣಬೆಗಳು…ಹೆಚ್ಚಿನ ಪ್ರೋಟೀನ್ ಅಂಶವನ್ನು ಹೊಂದಿರುತ್ತವೆ. ಇವು ರೈತರ ಪಾಲಿಗೂ ಕೂಡ ವರದಾನವಾಗಲಿದೆ. ಮಹಿಳಾ ರೈತರು ಕೂಡ ಅಣಬೆ ಕೃಷಿಯಿಂದ ಗುಡಿ ಕೈಗಾರಿಕೆಯಾಗಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಆದರೆ, ಕೃಷಿ ಮಾಡಿದವುಗಳಿಗಿಂತ ನೈಸರ್ಗಿಕವಾಗಿ ಬೆಳೆಯುವ ಅಣಬೆಗೆ ಯಾವಾಗಲೂ ಬೇಡಿಕೆ ಹೆಚ್ಚು, ಹಾಗೆ ಬೆಲೆಯೂ ಕೂಡ. ನಮಗೆ ಮಾರುಕಟ್ಟೆಯಲ್ಲಿ 100 ರಿಂದ ರೂ. 200 ವರೆಗೆ ಸಿಗುತ್ತದೆ. ಸಾವಯವ ಪದ್ಧತಿಯಲ್ಲಿ ಬೆಳೆದರೆ ರೂ. 400 ರಿಂದ 500 ರೂಪಾಯಿವರೆಗೂ ಬೆಲೆ ಇದೆ.

ಜಾರ್ಖಂಡ್ ರಾಜ್ಯದ ಕೆಲವು ಭಾಗಗಳಲ್ಲಿ ನೈಸರ್ಗಿಕವಾಗಿ ದೊರೆಯುವ ಅಪರೂಪದ ಅಣಬೆಗೆ ಹೆಚ್ಚಿನ ಬೇಡಿಕೆಯಿದೆ. ಏಕೆಂದರೆ ಇವು ಎರಡು ತಿಂಗಳಿಗೊಮ್ಮೆ ಮಾತ್ರ ಲಭ್ಯವಿವೆ. ನೈಸರ್ಗಿಕವಾಗಿ ಮರಗಳ ಕೆಳಗೆ ಬೆಳೆಯುವ ಈ ಅಣಬೆಗಳನ್ನು ಸಂಗ್ರಹಿಸುವುದು ಸ್ವಲ್ಪಮಟ್ಟಿಗೆ ರೂಢಿಯಾಗಿದೆ. ಇವುಗಳು ಮಾರುಕಟ್ಟೆಯಲ್ಲಿ ಲಭ್ಯವಾದಾಗ ಬೆಲೆಯೂ ಅಧಿಕವಾಗಿರುತ್ತದೆ.

ಅಂತಹ ಅಪರೂಪದ ಅಣಬೆಯನ್ನು ‘ರುಗ್ಡಾ’ ಎಂದು ಕರೆಯಲಾಗುತ್ತದೆ. ಮಾರುಕಟ್ಟೆಯಲ್ಲಿ ಇವುಗಳಿಗೆ ಸಂಪೂರ್ಣ ಬೇಡಿಕೆಯಿದ್ದು, ಒಂದು ಕಿಲೋ 800 ರೂ.ವರೆಗೆ ಇರುತ್ತದೆ. ಬೇಡಿಕೆ ಹೆಚ್ಚಾದರೆ ಒಮ್ಮೊಮ್ಮೆ ಕೆಜಿಗೆ 1200 ರೂಪಾಯಿವರೆಗೂ ಸಿಗುತ್ತದೆ. ಏಕೆಂದರೆ ಈ ರುಗ್ಡಾ ಅಣಬೆಗಳು ವರ್ಷವಿಡೀ ಸಿಗುವುದಿಲ್ಲ. ಕೇವಲ ಎರಡು ತಿಂಗಳಿಗೆ ಒಮ್ಮೆ ಮಾತ್ರ ಕಂಡುಬರುತ್ತವೆ. ಕೆಲವು ಆದಿವಾಸಿಗಳು ಇದನ್ನು ಅರಣ್ಯಗಳಲ್ಲಿ ಸಂಗ್ರಹಿಸಿ ಪಟ್ಟಣಗಳಿಗೆ ತಂದು ಮಾರಾಟ ಮಾಡುತ್ತಾರೆ. ಅವು ಯಾವ ಸಮಯದಲ್ಲಿ ಮೊಳಕೆಯೊಡೆಯುತ್ತವೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!