ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್‌ಗೆ ಒಳ್ಳೆಯದಾಗಲಿ, ಆದಷ್ಟು ಬೇಗ ಹೊರಬರಲಿ ಎಂದು ಪತ್ನಿ ವಿಜಯಲಕ್ಷ್ಮಿ ದರ್ಶನ್ ಕುತ್ತಿಗೆಗೆ ದಾರವೊಂದನ್ನು ಕಟ್ಟಿದ್ದು, ಇದನ್ನು ತೆಗೆಸುವ ಸಾಧ್ಯತೆ ಇದೆ.
ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ದರ್ಶನ್ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಇನ್ನೂ ನಿನ್ನೆ ವಿಮ್ಸ್ ಆಸ್ಪತ್ರೆಗೆ ಸ್ಕ್ಯಾನಿಂಗ್‌ಗೆ ದರ್ಶನ್ ಬರುವ ಮುನ್ನ ಪತಿಯ ಒಳಿತಿಗೆ ಪತ್ನಿ ಕಟ್ಟಿದ್ದ ದಾರ ತೆಗೆಸುವ ಸಾಧ್ಯತೆಯಿದೆ. ಜೈಲು ನಿಯಮದ ಉಲ್ಲಂಘನೆ ಹಿನ್ನೆಲೆ ದರ್ಶನ್‌ಗೆ ಕಟ್ಟಿದ್ದ ದಾರ ತೆಗೆಸುವ ಸಾಧ್ಯತೆಯಿದೆ.
ನಿನ್ನೆ ದರ್ಶನ್ ವಿಮ್ಸ್ ಆಸ್ಪತ್ರೆಗೆ ಸ್ಕ್ಯಾನಿಂಗ್‌ಗೆ ತೆರಳುವ ಮುನ್ನ ವಿಜಯಲಕ್ಷ್ಮಿ ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ, ಪತಿಗೆ ದೇವರ ಪ್ರಸಾದದ ಜೊತೆ ದಾರವನ್ನು ಕೂಡ ಕಟ್ಟಿದ್ದರು. ದರ್ಶನ್‌ಗೆ ಏನು ಸಮಸ್ಯೆ ಆಗಬಾರದು ಎಂದು ಪತ್ನಿ ದಾರವೊಂದನ್ನು ಕುತ್ತಿಗೆಗೆ ಕಟ್ಟಿದ್ದರು. ಅದನ್ನು ಕೂಡ ತೆಗೆಸುವ ಸಾಧ್ಯತೆ ಇದೆ. ಜೈಲು ನಿಯಮದ ಪ್ರಕಾರ, ಖೈದಿ ಅಥವಾ ವಿಚಾರಣಾಧಿನ ಖೈದಿ ಯಾವುದೇ ದಾರ, ಚೈನು, ಕಡಗ ಹಾಕಿಕೊಳ್ಳುವಂತಿಲ್ಲ. ಹಾಗಾಗಿ ರೂಲ್ಸ್ ಪ್ರಕಾರ, ದರ್ಶನ್ ಹಾಕಿಕೊಂಡಿರುವ ದಾರವನ್ನು ಕೂಡ ತೆಗೆಸಲಿದ್ದಾರೆ ಎನ್ನಲಾಗಿದೆ.