ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರದಲ್ಲಿ ನಡೆಯುತ್ತಿರುವ exhibitionನಲ್ಲಿ ದುರಂತವೊಂದು ಸಂಭವಿಸಿದ್ದು, ranger swing ride ನಿಂದ ಬಿದ್ದು 21 ವರ್ಷದ ಯುವತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಐವರನ್ನು ಅರೆಸ್ಟ್ ಮಾಡಲಾಗಿದೆ.
ವಿಜಯಪುರ ನಗರದ ನವಭಾಗ್ ರಸ್ತೆಯಲ್ಲಿರೋ ಫಿಶ್ ಟನಲ್ ಎಕ್ಪೋದಲ್ಲಿ ಈ ಅವಘಡವೊಂದು ಸಂಭವಿಸಿದ್ದು, ಫಿಶ್ ಟನಲ್ ಎಕ್ಸ್ಪೋದಲ್ಲಿ ರೇಂಜರ್ ಸ್ವಿಂಗ್‌ನಿಂದ ಬಿದ್ದು 21 ವರ್ಷ ಯುವತಿ ನಿಖಿತಾ ಬಿರಾದರ್ ಎಂಬಾಕೆ ಸಾವನ್ನಪ್ಪಿದ್ದಾರೆ.
ಮೂಲಗಳ ಪ್ರಕಾರ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಶಿಕ್ಷಕ ಅರವಿಂದ ಬಿರಾದರ ಪತ್ನಿ ಗೀತಾ ಪುತ್ರಿ ನಿಖಿತಾ ಬಿರಾದರ ಹಾಗೂ ನೆರಯ ಮನೆ ಮಂದಿ ಜೊತೆಗೆ ಕಳೆದ ಅಕ್ಟೋಬರ್ 20 ರಂದು ಆಗಮಿಸಿದ್ದರು. ಈ ವೇಳೆ ನಿಖಿತಾ ಹಾಗೂ ಆಕೆಯ ಇಬ್ಬರು ಗೆಳೆತಿಯರು ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದರು.
ತಲೆ ಕೆಳಗಾಗಿ ತಿರುಗಿಸೋ ರೇಂಜರ್ ಸ್ವಿಂಗ್ ನಲ್ಲಿ ಕುಳಿತುಕೊಳ್ಳುವಾಗಲೇ ನಿಖಿತಾ ತಾಯಿ ಗೀತಾ ಬಿರಾದಾರ್ ಆಪರೇಟರ್ ಗೆ ಬೆಲ್ಟ್ ಹಾಗೂ ಇತರೆ ಸುರಕ್ಷತಾ ಸಾಧನಗಳು ಸರಿಯಾಗಿವೆಯಾ ಎಂದು ಪ್ರಶ್ನೆ ಮಾಡಿದ್ದರು. ಆಗ ಆರಪೇಟರ್ ರಮೇಶ ರಾಯ್ ಎಲ್ಲ ಸರಿಯಾಗಿದೆ ಎಂದು ಹೇಳಿದ್ದ ಎನ್ನಲಾಗಿದೆ.
ರೇಂಜರ್ ಸ್ವಿಂಗ್ ಆರಂಭವಾಗುತ್ತಿದ್ದಂತೆ ನಿಖಿತಾ ಕುಟುಂಬದವರು ಹಾಗು ಆಕೆ ಗೆಳತಿ ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದವರ ವಿಡಿಯೋ ಮಾಡುತ್ತಿದ್ದರು. ರೇಂಜರ್ ಸ್ವಿಂಗ್ ಆನ್ ಆಗಿ ತೆಲೆ ಕೆಳಗಾಗಿ ಮಾಡುತ್ತಿದ್ದಂತೆ ಅದರಲ್ಲಿದ್ದವರು ಭಯದಿಂದ ಕಿರುಚಾಡಿದರು. ಮಕ್ಕಳು ಕಿರುಚಿಕೊಳ್ಳುತ್ತಲೇ ನಿಖಿತಾ ತಾಯಿ ಎಲ್ಲರೂ ಭಯಗೊಂಡಿದ್ದಾರೆ. ರೇಂಜರ್ ಸ್ವಿಂಗ್ ಬಂದ್ ಮಾಡಿ ಎಂದು ಆಪರೇಟರ್ ಗೆ ಪರಿ ಪರಿಯಾಗಿ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಆವರ ಮಾತನ್ನು ಆಪರೇಟರ್ ರಮೇಶ್ ರಾಯ್ ಕೇಳಿಲ್ಲ.
ಇದೇ ವೇಳೆ ನಿಖಿತಾಗೆ ಹಾಕಿದ್ದ ಸೇಪ್ಟಿ ಬೆಲ್ಟ್ ಸಡಿಲಾಗಿ ಕಟ್ ಆಗಿದೆ. ಕೂಡಲೇ ಆಕೆ ಮೇಲಿಂದ ಕೆಳಗೆ ಬಿದ್ದಿದ್ದಾಳೆ. ಈ ಹಿನ್ನೆಲೆಯಲ್ಲಿ ತಲೆ ಹಾಗೂ ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ನಿಖಿತಾ ಸಾವನ್ನಪ್ಪಿದ್ದಾಳೆ.
ಇದಕ್ಕೆ ಫೀಶ್ ಟನಲ್ ಎಕ್ಪೋ ಮ್ಯಾನೇಜ್ಮೆಂಟ್ ನಿರ್ಲಕ್ಷ್ಯ ಎಂದು ಆರೋಪಿಸಲಾಗಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಪೊಲೀಸರು ತನಿಖೆ ನಡೆಸಿದ್ದಾರೆ.