ಡಾಲರ್‌ ವಿರುದ್ಧ 25 ಪೈಸೆ ಕುಸಿದ ರೂಪಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಚ್ಚಾ ತೈಲಗಳ ಬೆಲೆಗಳಲ್ಲಿನ ಹೆಚ್ಚಳ ಹಾಗು ದೇಶೀಯ ಷೇರುಗಳ ನಕಾರಾತ್ಮಕ ಪ್ರವೃತ್ತಿಯಿಂದಾಗಿ ಸೋಮವಾರದಂದು ಯುಎಸ್‌ ಡಾಲರ್‌ ವಿರುದ್ಧ ಭಾರತೀಯ ರೂಪಾಯಿಯು 25 ಪೈಸೆ ಕುಸಿದು 82.46 ಕ್ಕೆ ತಲುಪಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ದೇಶೀಯ ಘಟಕವು ಡಾಲರ್ ವಿರುದ್ಧ 82.44 ರಲ್ಲಿ ತೆರೆದ ರೂಪಾಯಿಯು ದುರ್ಬಲವಾಗಿ ಪ್ರಾರಂಭವಾಯಿತು, ನಂತರ 82.46 ಗೆ ಕುಸಿದು ಅದರ ಕೊನೆಯ ಮುಕ್ತಾಯಕ್ಕಿಂತ 25 ಪೈಸೆಯ ಕುಸಿತವನ್ನು ದಾಖಲಿಸಿತು. ಶುಕ್ರವಾರದಂದು ಡಾಲರ್‌ ಎದುರು ರೂಪಾಯಿಯು 82.21ಕ್ಕೆ ಮುಕ್ತಾಯಗೊಂಡಿತ್ತು.

ಆರು ಕರೆನ್ಸಿಗಳ ವಿರುದ್ಧ ಗ್ರೀನ್‌ಬ್ಯಾಕ್‌ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.48 ರಷ್ಟು ಏರಿಕೆಯಾಗಿ 102.99 ಕ್ಕೆ ತಲುಪಿದೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯು ಆರಂಭಿಕವಾಗಿ ತುಸು ಅಂಕ ಗಳಿಸಿದರೂ ನಂತರದಲ್ಲಿ ನಕಾರಾತ್ಮಕ ಪ್ರದೇಶಕ್ಕೆ ಕುಸಿದಿದೆ. 30-ಷೇರ್ ಬಿಎಸ್‌ಇ ಸೆನ್ಸೆಕ್ಸ್ 64.56 ಪಾಯಿಂಟ್ ಅಥವಾ 0.11 ಶೇಕಡಾ ಕಡಿಮೆಯಾಗಿ 58,926.96 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ವಿಶಾಲವಾದ NSE ನಿಫ್ಟಿ 9.60 ಪಾಯಿಂಟ್ ಅಥವಾ 0.06 ಶೇಕಡಾ ಇಳಿದು 17,350.15 ಕ್ಕೆ ತಲುಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!