ಡಾಲರ್ ಎದುರು ಬಿದ್ದ ರೂಪಾಯಿ: ಸಾರ್ವಕಾಲಿಕ ಕನಿಷ್ಠ ಮಟ್ಟ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ ಕಚ್ಚಾ ತೈಲಗಳ ಬೆಲೆ ಏರಿಕೆ, ನಿರಂತರ ವಿದೇಶಿ ನಿಧಿಗಳ ಹೊರಹರರಿವಿನಿಂದಾಗಿ ರೂಪಾಯಿಯು ಸಾರ್ವಕಾಲಿಕ ಕನಿಷ್ಟ ಮಟ್ಟವನ್ನು ದಾಖಲಿಸಿದೆ.

ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮತ್ತಷ್ಟು ದುರ್ಬಲಗೊಂಡಿದ್ದು ಸೆನ್ಸೆಕ್ಸ್‌ ನಲ್ಲಿ ಏರಿಕೆಯಾದರೂ ರೂಪಾಯಿಯು ಕುಸಿತದಲ್ಲೇ ಇದ್ದು ಯುಎಸ್ ಡಾಲರ್ ವಿರುದ್ಧ ರೂಪಾಯಿ 14 ಪೈಸೆ ಕುಸಿದು 77.69 ಕ್ಕೆ ತಲುಪಿದೆ.

ಆರ್ಥಿಕ ಕುಸಿತದಿಂದ ಪ್ರಾದೇಶಿಕ ಕರೆನ್ಸಿಗಳು ಕುಸಿದಿದ್ದು ಯುಸ್‌ ಡಾಲರ್‌ ಬಲಗೊಳುತ್ತಿದೆ. ಆದರೆ ಭಾರತದಲ್ಲಿ ರಿಸರ್ವ ಬ್ಯಾಂಕ್‌ ಮಧ್ಯಸ್ಥಿಕೆಯು ನಷ್ಟವನ್ನು ನಿರ್ಬಂಧಿಸಿದೆ ಎಂದು ಫಾರೆಕ್ಸ್‌ ವ್ಯಾಪಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!