ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಮನೆಯಿಂದ ಸಾನ್ಯ ಅಯ್ಯರ್ ಹೊರಬಂದಿದ್ದು, ಇದರ ಬೆನ್ನಲ್ಲೇ ರೂಪೇಶ್ ಶೆಟ್ಟಿ ಬಗ್ಗೆ ಭಾವುಕರಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾನ್ಯ ಮಾಡಿದ ಪೋಸ್ಟ್ ಸಖತ್ ವೈರಲ್ ಆಗಿದೆ.
ದೊಡ್ಮನೆಯಲ್ಲಿ ಸಾನ್ಯ ಮತ್ತು ರೂಪೇಶ್ ಶೆಟ್ಟಿ ಜೊತೆಯಾಗಿಯೇ ಕಾಣಿಸಿಕೊಂಡಿದ್ದರು. ಓಟಿಟಿ ಟು ಬಿಗ್ ಬಾಸ್ ಅಂಗಳದವರೆಗೆಗೂ 100 ದಿನದ ಆಟದಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡಿದ್ದರು. ಆದರೆಗ ಬಿಗ್ ಬಾಸ್ ಮನೆಯಿಂದ 6 ವಾರಕ್ಕೆ ಸಾನ್ಯ ಎಲಿಮಿನೇಟ್ ಆಗಿರೋದು ರೂಪೇಶ್‌ಗೆ ನುಂಗಲಾರದ ತುತ್ತಾಗಿದೆ. ಸಾನ್ಯ ಎಲಿಮಿನೇಟ್ ಬೆನ್ನಲ್ಲೇ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದರು.
ಈ ವೇಳೆ ರೂಪೇಶ್ ಸಾನ್ಯ ತನ್ನ ಲೈಫ್ ಎಷ್ಟು ಮುಖ್ಯ ಎಂಬುದನ್ನ ತಿಳಿಸಿದ್ದರು. ಇದೀಗ ಹೊರಬಂದ ಸಾನ್ಯ, ರೂಪೇಶ್ ಬಗ್ಗೆ ಭಾವುಕರಾಗಿದ್ದಾರೆ. ತಮ್ಮ ಮನದ ಮಾತನ್ನ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
‘ಬದಲಾಗಲು ಸಾಧ್ಯವೇ ಇಲ್ಲ ರೂಪಿ. ಎಂದಿಗೂ ಆ ಮುದ್ದು ನಗುವಾಗಿ ನಿನ್ನಲ್ಲಿ ನಾನು. ಇದು ಅಂತರವಲ್ಲ ನಮ್ಮ ಮನಸ್ಸು ಇನ್ನೂ ಹತ್ತಿರ. ನಿನ್ನ ಶಕ್ತಿಯಾಗಿರಲು ಯಾವಾಗಲೂ ಶ್ರಮಿಸುತ್ತೇನೆ. ನನ್ನ ರಾಕ್‌ಸ್ಟಾರ್’ ಎಂದು ರೂಪೇಶ್ ಬಗ್ಗೆ ಸಾನ್ಯ ಬರೆದುಕೊಂಡಿದ್ದಾರೆ.