ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಜೆ ಪೀಕ್ ಅವರ್‌ನಲ್ಲಿ ಮಂಗಳೂರಿನಿಂದ ವಿಟ್ಲ ಹಾಗೂ ಕಡೇಶಿವಾಲಯ ಕಡೆಗೆ ಸಮರ್ಪಕವಾಗಿ ಕೆಎಸ್ಸಾರ್ಟಿಸಿ ಬಸ್ ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಗೊಳಗಾಗಿದ್ದಾರೆ.
ವಿಟ್ಲ, ಕಡೇಶಿವಾಲಯ ಸಹಿತ ಈ ಭಾಗದಲ್ಲಿ ಸಂಚರಿಸುವ ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿದ್ದರೂ ಸಂಜೆ 4 ರಿಂದ 6 ಗಂಟೆವರೆಗೆ ಯಾವುದೇ ಕೆಎಸ್ಸಾರ್ಟಿಸಿ ಬಸ್ ಸಂಚರಿಸದ ಪರಿಣಾಮ ಖಾಸಗಿ ಬಸ್‌ನಲ್ಲಿ ಹಣ ತೆತ್ತು ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ ಎಂದು ವಿದ್ಯಾರ್ಥಿ ಸಮೂಹ ದೂರಿದೆ. ವಿಟ್ಲ, ಕಡೇಶಿವಾಲಯ ಸಹಿತ ಈ ಭಾಗದಲ್ಲಿ ಸಮರ್ಪಕವಾಗಿ ಕೆಎಸ್ಸಾರ್ಟಿಸಿ ಬಸ್ ಸಂಚಾರವಿಲ್ಲದ ಕಾರಣದಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಮನೆಗೆ ತಲಪಲು ಸಾಧ್ಯವಾಗದಿದ್ದು, ವಿದ್ಯಾರ್ಥಿಗಳ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತಿದೆ ಎಂದು ತಿಳಿಸಿರುವ ವಿದ್ಯಾರ್ಥಿ ಸಮೂಹ ಕೆಎಸ್ಸಾರ್ಟಿಸಿಯ ನಿಯಂತ್ರಣ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸ್ ಸಮಸ್ಯೆ ಕುರಿತಾಗಿ ಕೆಎಸ್ಸಾರ್ಟಿಸಿ ಬಿ.ಸಿ. ರೋಡ್ ಘಟಕ, ಪುತ್ತೂರು ಘಟಕದ ಮೆನೇಜರ್‌ಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ ಎಂದು ವಿದ್ಯಾರ್ಥಿ ಸಮೂಹ ಆರೋಪಿಸಿದೆ.