ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ನ ಕೀವ್ನಲ್ಲಿರುವ ಟಿವಿ ಟವರ್ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದ್ದು, ಐದು ನಾಗರಿಕರು ಬಲಿಯಾಗಿದ್ದಾರೆ.
ಟಿವಿ ಟವರ್ ಮೇಲಿನ ಬಾಂಬ್ ದಾಳಿಯಿಂದ ಇಡೀ ದೇಶದಲ್ಲಿ ಟಿವಿ ಚಾನೆಲ್ಗಳ ಪ್ರಸಾರ ನಿಂತಿದೆ. ಈ ದಾಳಿಯಿಂದ ಎರಡನೇ ಮಹಾಯುದ್ಧ ಕಾಲದಲ್ಲಿ ಸಾಮೂಹಿಕ ಹತ್ಯೆಯಾಗಿದ್ದ ಯಹೂದಿಗಳ ಸ್ಮರಣಾರ್ಥ ನಿರ್ಮಿಸಿದ್ದ ಸ್ಮಾರಕ ಕೇಂದ್ರಕ್ಕೂ ಹಾನಿಯಾಗಿದೆ.
ಕೀವ್ನ ಭದ್ರತಾ ಸೇವೆಯ ಪ್ರಧಾನ ಕಚೇರಿ ಮೇಲೆ ಬಾಂಬ್ ದಾಳಿ ನಡೆಸುತ್ತೇವೆ, ಸುತ್ತಮುತ್ತಲ ಪ್ರದೇಶದ ಜನರು ಈಗಲೇ ಸ್ಥಳಾಂತರಗೊಳ್ಳಬೇಕು. ಹಾಗೂ ಯುದ್ಧದ ಬಗ್ಗೆ ಜನರಿಗೆ ಮಾಹಿತಿ ಸಿಗದಿರಲಿ ಎನ್ನುವ ಕಾರಣಕ್ಕೆ ಇನ್ಫಾರ್ಮೇಶನ್ ಮತ್ತು ಸೈಕಾಲಜಿಕಲ್ ಸೆಂಟರ್ ಮೇಲೆ ಕೂಡ ಆಕ್ರಮಣ ಮಾಡುವುದಾಗಿ ರಷ್ಯಾ ಎಚ್ಚರಿಕೆ ನೀಡಿತ್ತು.
ಉಕ್ರೇನ್ನ ಎರಡನೇ ದೊಡ್ಡ ನಗರ ಖಾರ್ಕೀವ್ನಲ್ಲಿ ರಷ್ಯಾ ನಿರಂತರವಾಗಿ ಶೆಲ್, ರಾಕೆಟ್ ದಾಳಿ ನಡೆಸಿದ್ದು, 11 ಮಂದಿ ಮೃತಪಟ್ಟಿದ್ದಾರೆ.