ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಉಕ್ರೇನ್ ಮೇಲೆ ಅಪ್ರಚೋದಿತ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ವಾಯುನೆಲೆ ರಷ್ಯಾ ಮೇಲೆ ಸಾಧ್ಯವಾಗುವ ಎಲ್ಲಾ ನಿರ್ಬಂಧಗಳನ್ನು ಹೇರುತ್ತಿದೆ.
ಈಗಾಗಲೇ ಅಮೆರಿಕ ವಾಯುನೆಲೆಯಲ್ಲಿ ರಷ್ಯಾ ವಿಮಾನಗಳನ್ನು ನಿಷೇಧ ಮಾಡಲಾಗಿದ್ದು, ರಷ್ಯಾ ವಿರುದ್ಧ ಉಕ್ರೇನ್ ಪ್ರಬಲ ಪ್ರತೀಕಾರ ನೀಡುತ್ತಿದೆ. ನಾವು ಉಕ್ರೇನ್ ಪರವಾಗಿ ನಿಲ್ಲುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ತಿಳಿಸಿದ್ದಾರೆ.
ಯಕ್ರೇನ್ ಮೇಲಿನ ಸಂಘರ್ಷದ ಮೊದಲ ದಿನದಿಂದಲೂ ರಷ್ಯಾ ಮುನ್ನಡೆಯಲ್ಲಿದೆ. ಆದರೆ ಅಮೆರಿಕ ಯುದ್ಧರಂಗಕ್ಕೆ ಪ್ರವೇಸಬಹುದು ಎಂಬ ಹಲವು ಅಭಿಪ್ರಾಯಗಳಿಗೆ ಅಧ್ಯಕ್ಷ ಜೋ ಬಿಡೆನ್ ತೆರೆ ಎಳೆದಿದ್ದು, ಅಮೆರಿಕ ಉಕ್ರೇನ್ ಪರವಾಗಿ ಇರಲಿದೆ ಆದರೆ ನೇರ ಯುದ್ಧ ಭೂಮಿಗೆ ಬಂದು ಹೋರಾಟ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ಪೂರ್ವನಿಯೋಜಿತ ದಾಳಿ ನಡೆಸುತ್ತಿದೆ. ರಷ್ಯಾದ ಈ ನೆಯನ್ನು ಇಡೀ ವಿಶ್ವವೇ ಖಂಡಿಸಿದೆ. ಈಗಾಗಲೇ ಹಲವು ರಾಷ್ಟ್ರಗಳು ರಷ್ಯಾ ವಿರುದ್ಧ ಧ್ವನಿ ಎತ್ತಿದ್ದು, ವಾಯುಮಾರ್ಗಕ್ಕೆ ತಡೆ ಹಾಕಿವೆ. ಉಕ್ರೇನ್ ಜನತೆ ರಷ್ಯಾ ವಿರುದ್ಧ ಉತ್ತಮ ಹೋರಾಟ ನಡೆಸುತ್ತಿದ್ದಾರೆ ಎಂದರು.