ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಸತ್ಯಗಳು ಬೆಳಕಿಗೆ ಬರುತ್ತಿಲ್ಲ. ರಷ್ಯಾ ಮತ್ತು ಉಕ್ರೇನ್ ಎರಡೂ ಯುದ್ಧದ ಬಗ್ಗೆ ತಮ್ಮ ಅನುಕೂಲಕರ ಹೇಳಿಕೆಗಳನ್ನು ನೀಡುತ್ತಿವೆ. ಇದೀಗ ರಷ್ಯಾ ಉಕ್ರೇನ್‌ನ ಪಶ್ಚಿಮ ನಗರ ಸೊಲೆಡಾರ್ ಅನ್ನು ವಶಪಡಿಸಿಕೊಂಡಿದೆ ಎಂದು ಘೋಷಿಸಿದೆ. ಆದರೆ, ರಷ್ಯಾದ ಹೇಳಿಕೆಯನ್ನು ಉಕ್ರೇನ್ ಅಲ್ಲಗಳೆದಿದ್ದು, ರಷ್ಯಾ ಘೋಷಣೆ ಮಾಡಿದ ಕೆಲವೇ ನಿಮಿಷಗಳಲ್ಲಿ ಉಕ್ರೇನ್ ಮತ್ತೊಂದು ಘೋಷಣೆ ಮಾಡಿದೆ. ಸೊಲೆಡಾರ್ ನಗರವನ್ನು ರಷ್ಯಾ ವಶಪಡಿಸಿಕೊಳ್ಳಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ನಗರದಲ್ಲಿ ಭೀಕರ ಕಾಳಗ ಮುಂದುವರಿದಿದ್ದು, ಈ ಪಟ್ಟಣ ಬಹುಪಾಲು ಈಗಾಗಲೇ ನಾಶವಾಗಿದೆ. ಯುದ್ಧದ ಪ್ರಾರಂಭದ ನಂತರ ರಷ್ಯಾ ನಗರವನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ, ಆದರೆ ಉಕ್ರೇನ್ ಈ ನಗರ ತಮ್ಮ ಹಿಡಿತದಲ್ಲೇ ಇದೆ ಎಂದಿದೆ.
ಈ ಪ್ರದೇಶವನ್ನು ವಶಪಡಿಸಿಕೊಳ್ಳುವುದು ರಷ್ಯಾಕ್ಕೆ ಉಕ್ರೇನ್ ಅನ್ನು ಗೆಲ್ಲಲು ನಿರ್ಣಾಯಕವಾಗಿದೆ. ಇದು ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದಲ್ಲಿದೆ. ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ಕಡಿತಗೊಳಿಸಬಹುದು. ಅಮೇರಿಕನ್ ಮೌಲ್ಯಮಾಪನದ ಪ್ರಕಾರ, ಈ ನಗರದ ಅಷ್ಟು ಮುಖ್ಯವಾದುದ್ದೇನಲ್ಲ, ಈ ನಗರವನ್ನು ವಶಪಡಿಸಿಕೊಳ್ಳುವ ಮೂಲಕ ಮೇಲುಗೈ ಸಾಧಿಸಬಹುದು ಎಂದು ಉಕ್ರೇನ್ ಆಶಿಸುತ್ತಿದೆ ಈ ಊಹೆಯು ತಪ್ಪಾಗಿದೆ ಎಂದು ಅಮೆರಿಕ ಹೇಳಿದೆ.