ಭೋಗಿ ಹಬ್ಬದ ಸಡಗರ: ಮುಂಜಾನೆಯಿಂದಲೇ ಬೆಳಕಿನ ದೀಪೋತ್ಸವ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭೋಗಿ ಮಕರ ಸಂಕ್ರಾಂತಿ ಹಬ್ಬದ ಮೊದಲ ದಿನ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ  ವ್ಯಾಪಕವಾಗಿ ಆಚರಿಸಲಾಗುವ ಹಬ್ಬವಾಗಿದೆ. ಭೋಗಿಯಂದು, ಜನರು ಹಳೆಯದನ್ನು ತ್ಯಜಿಸುತ್ತಾರೆ. ಬದಲಾವಣೆ ಅಥವಾ ಪರಿವರ್ತನೆಗೆ ಕಾರಣವಾಗುವ ಹೊಸ ವಿಷಯಗಳ ಮೇಲೆ ಕೇಂದ್ರೀಕರಿಸುತ್ತಾರೆ. ಮುಂಜಾನೆ, ಜನರು ಮರದ ದಿಮ್ಮಿಗಳು, ಇತರ ಘನ-ಇಂಧನಗಳು ಉಪಯುಕ್ತವಲ್ಲದ ಮರದ ಪೀಠೋಪಕರಣಗಳೊಂದಿಗೆ ಬೆಂಕಿ ಹಾಕಿ ಸುಡುತ್ತಾರೆ. ಇದು ಸುಗ್ಗಿಯ ಮೊದಲ ದಿನದಂದು ಹೊಸ ವಿಷಯಗಳ ಪ್ರಾರಂಭವನ್ನು ಸೂಚಿಸುತ್ತದೆ.

ಅದರಲ್ಲೂ ತೆಲುಗು ರಾಜ್ಯಗಳಲ್ಲಿ ಅದ್ದೂರಿಯಾಗಿ ಆಚರಿಸುವ ಈ ಹಬ್ಬ ಭೋಗಿ ಎಂದರೆ ತಣ್ಣನೆಯ ಬೆಂಕಿ ಮಾತ್ರವಲ್ಲ.. ಪ್ರತಿ ವರ್ಷವೂ ಸೂರ್ಯನು ಮಕರ ರಾಶಿಗೆ ಬರುವ ಮುನ್ನಾ ದಿನ ಎಂತಲೂ ಕರೆಯುತ್ತಾರೆ. ಭೋಗಿಯಿಂದ ಮನೆಗಳಲ್ಲಿ ಹಬ್ಬದ ಕಳೆ ಬರುತ್ತದೆ. ಬಂಧು ಮಿತ್ರರೊಂದಿಗೆ ನಾಲ್ಕು ದಿನಗಳ ಕಾಲ ಹಬ್ಬದ ವಾತಾವರಣ ಇರುತ್ತದೆ.

ಭೋಗಿ ಹಬ್ಬದ ಮೊದಲ ದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬಣ್ಣಬಣ್ಣದ ರಂಗೋಲಿ, ತಳಿರು ತೋರಣಗಳಿಂದ ಊರಿನ ಬೀದಿಗಳು ಕಂಗೊಳಿಸುತ್ತವೆ. ರೈತರಿಗೆ ಸುಗ್ಗಿ ಕಾಲವಾದ್ದರಿಂದ ಬೆಳೆದ ಬೆಳೆಯನ್ನು ಒಟ್ಟುಮಾಡಿ ಪೂಜಿಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!