ಉಕ್ರೇನ್ ಮೇಲೆ ಡ್ರೋನ್ ದಾಳಿ ನಡೆಸಿದ ರಷ್ಯಾ: ಕಟ್ಟಡಗಳು ಧ್ವಂಸ, 100ಕ್ಕೂ ಹೆಚ್ಚು ಪ್ರದೇಶದಲ್ಲಿ ವಿದ್ಯುತ್ ಕಡಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಮತ್ತು ಉಕ್ರೇನ್ ನಡುವಿನ ಕದನ ಯಾಕೋ ನಿಲ್ಲುವಂತೆ ಕಾಣುತ್ತಿಲ್ಲ. ಕ್ರೈಮಿಯಾ ಸೇತುವೆಯ ಸ್ಫೋಟದ ನಂತರ ರಷ್ಯಾ ಆಘಾತಕ್ಕೊಳಗಾಗಿದ್ದು, ರಷ್ಯಾದ ಸೈನಿಕರು ಉಕ್ರೇನ್ ಮೇಲೆ ಒಬ್ಬರ ನಂತರ ಒಬ್ಬರು ದಾಳಿ ಮಾಡುತ್ತಿದ್ದಾರೆ.

ರಷ್ಯಾ ಸೋಮವಾರ ಮತ್ತೆ ಉಕ್ರೇನ್ ಮೇಲೆ ಮಾರಣಾಂತಿಕ ಡ್ರೋನ್‌ಗಳ ಮೂಲಕ ದಾಳಿ ಮಾಡಿದೆ. ಈ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದರೆ, 100ಕ್ಕೂ ಹೆಚ್ಚು ಪ್ರದೇಶಗಳು ವಿದ್ಯುತ್ ಕಳೆದುಕೊಂಡಿವೆ. ಅಲ್ಲದೆ ಹಲವು ಕಟ್ಟಡಗಳು ಕೂಡ ನಾಶವಾಗಿವೆ.

ಸೋಮವಾರ ಉಕ್ರೇನ್ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿವೆ ಎಂದು ಉಕ್ರೇನ್ ಪ್ರಧಾನಿ ಹೇಳಿದ್ದಾರೆ. ಈ ದಾಳಿಯಲ್ಲಿ ಅವರ ಹಲವು ಪ್ರಮುಖ ಮೂಲಸೌಕರ್ಯಗಳು ನಾಶವಾಗಿವೆ. ಅಷ್ಟೇ ಅಲ್ಲ, ಈ ದಾಳಿಯಲ್ಲಿ ಸುಮಾರು 100 ಪಟ್ಟಣಗಳು ​​ವಿದ್ಯುತ್ ಕಳೆದುಕೊಂಡಿವೆ ಎಂದರು.

ಏಜೆನ್ಸಿಯ ಪ್ರಕಾರ, ರಷ್ಯಾ ಸೋಮವಾರ ಬೆಳಿಗ್ಗೆ ರಾಜಧಾನಿ ಕೈವ್‌ನ ಮಧ್ಯಭಾಗದಲ್ಲಿ ಡ್ರೋನ್ ದಾಳಿಗಳನ್ನ ಪ್ರಾರಂಭಿಸಿತು. ಜನರು ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಜನದಟ್ಟಣೆ ಇರುವ ಪ್ರದೇಶದಲ್ಲಿ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಉಕ್ರೇನ್‌ನ ಹಲವು ನಗರಗಳಲ್ಲಿ ರಷ್ಯಾ ಸೇನೆ ಗುಂಡಿನ ದಾಳಿ ನಡೆಸಿದ್ದು, ಒಂದೇ ವಾರದಲ್ಲಿ ಎರಡನೇ ಬಾರಿಗೆ ರಷ್ಯಾ ಉಕ್ರೇನ್‌ನಾದ್ಯಂತ ದಾಳಿ ನಡೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!