ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ- ಉಕ್ರೇನ್ ಸಂಘರ್ಷವು ಎರಡನೇ ತಿಂಗಳಿಗೆ ಕಾಲಿರಿಸಿದ ಬೆನ್ನಲ್ಲೇ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಉಭಯ ದೇಶಗಳ ಅಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ. ಮುಂದಿನ ವಾರ ವ್ಲಾಡಿಮೀರ್ ಪುಟಿನ್ ಮತ್ತು ವೊಲೋಡೋಮೀರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಲಿರುವ ಗುಟೆರಸ್ ಯುದ್ಧ ನಿಲ್ಲಿಸುವ ಪ್ರಸ್ತಾಪವನ್ನು ಮುಂದಿಡಲಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ರಷ್ಯಾದೊಂದಿಗೆ ಇದು ಮೊದಲ ಮುಖಾಮುಖಿ ಭೇಟಿಯಾಗಿದ್ದು ಉಕ್ರೇನ್ ನಲ್ಲಿ ಶಾಂತಿ ತರಲು ತುರ್ತಾಗಿ ಮಾಡಬಹುದಾಗಿರುವ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ವಿಶ್ವ ಸಂಸ್ಥೆಯ ವಕ್ತಾರೆ ಎರಿ ಕೆನೆಕೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತದನಂತರ ವೊಲೋಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಮಾಡುವ ಜೊತೆಗೆ ಉಕ್ರೇನ್ ನಾಗರೀಕರಿಗೆ ಮಾನವೀಯ ನೆರವುಗಳನ್ನು ಹೆಚ್ಚಿಸಲು ವಿಶ್ವ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಈ ನಡುವೆ ರಷ್ಯಾ “ಉಕ್ರೇನ್ ನ ಪೂರ್ವ ಮತ್ತು ದಕ್ಷಿಣ ಭಾಗಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವವರೆಗೆ ಆಕ್ರಮಣವನ್ನು ನಿಲ್ಲಿಸುವುದಿಲ್ಲ” ಎಂದಿದೆ. ಪ್ರಸ್ತುತ ರಷ್ಯಾವು ಕೀವ್ ಮೇಲೆ ಗಮನವನ್ನು ಕಡಿಮೆ ಮಾಡಿ ದಕ್ಷಿಣ ಉಕ್ರೇನ್ ಭಾಗಗಳಲ್ಲಿ ಹೆಚ್ಚಿನ ಸೇನಾ ನಿಯೋಜನೆ ಮಾಡುತ್ತಿದೆ ಎಂದು ವರದಿಗಳು ಹೇಳಿವೆ.