Thursday, March 23, 2023

Latest Posts

‘ಯುದ್ಧದಲ್ಲಿ ರಷ್ಯಾ ಗೆಲ್ಲೋದಿಲ್ಲ, ಯಾಕಂದ್ರೆ ಉಕ್ರೇನ್ ಜತೆ ನಾವಿದ್ದೇವೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಯುದ್ಧದಲ್ಲಿ ಎಂದಿಗೂ ಗೆಲ್ಲೋದಿಲ್ಲ, ಗೆಲ್ಲೋದಕ್ಕೆ ನಾವು ಬಿಡೋದಿಲ್ಲ, ಉಕ್ರೇನ್ ಜತೆ ನಾವಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

ಉಕ್ರೇನ್‌ಗೆ ಜೋ ಬಿಡೆನ್ ಗೌಪ್ಯವಾಗಿ ಉಕ್ರೇನ್‌ಗೆ ಭೇಟಿ ಕೊಟ್ಟಿದ್ದು ರಷ್ಯಾ ಅಧ್ಯಕ್ಷ ಪುಟಿನ್‌ಗೆ ಇಷ್ಟವಾಗಿರಲಿಲ್ಲ, ಉಕ್ರೇನ್ ಮೇಲೆ ಮತ್ತೆ ಯುದ್ಧ ಸಾರುತ್ತೇವೆ ಎಂದು ಪುಟಿನ್ ಹೇಳಿದ್ದರು.

ಇದಕ್ಕೆ ಅಮೆರಿಕ ತಕ್ಕ ಉತ್ತರ ನೀಡಿದ್ದು, ಎಂದಿಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಗೆಲ್ಲೋದಕ್ಕೆ ಬಿಡೋದಿಲ್ಲ, ಸಾಧ್ಯವೇ ಇಲ್ಲ ಯಾಕಂದ್ರೆ ಉಕ್ರೇನ್ ಜತೆ ನಾವಿದ್ದೇವೆ. ಉಕ್ರೇನ್ ಜತೆ ಇತರ ಮಿತ್ರ ರಾಷ್ಟ್ರಗಳೂ ಇವೆ ಎಂದು ಬಿಡೆನ್ ಹೇಳಿದ್ದಾರೆ.

ಉಕ್ರೇನ್ ಜನರನ್ನು ವೈಮಾನಿಕ ದಾಳಿಯಿಂದ ರಕ್ಷಿಸಲು ಫಿರಂಗಿ, ಮದ್ದು-ಗುಂಡು, ರಕ್ಷಣಾ ವ್ಯವಸ್ಥೆಗಳು ಹಾಗೂ ವಾಯು ಕಣ್ಗಾವಲು ರಾಡರ್‌ಗಳು ಸೇರಿದಂತೆ ನಿರ್ಣಾಯಕ ಸಲಕರಣೆಗಳನ್ನು ನೀಡುತ್ತೇವೆ ಎಂದು ಅಮೆರಿಕ ಹೇಳಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!