ಉಕ್ರೇನ್​ ಮೇಲೆ ರಷ್ಯಾದ ವೈಮಾನಿಕ ದಾಳಿ, 17 ಮಂದಿ ಸಾವು, 60 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಉಕ್ರೇನಿಯನ್ ನಗರಗಳ ಮೇಲೆ ರಷ್ಯಾ ಮತ್ತೆ ದಾಳಿ ಮುಂದುವರಿಸಿದ್ದು, ಈ ಬಾರಿಯ ವೈಮಾನಿಕ ದಾಳಿಯಿಂದಾಗಿ 17 ಮಂದಿ ಮೃತಪಟ್ಟಿದ್ದಾರೆ.

ಇದು ಬುಧವಾರ ಉತ್ತರ ಉಕ್ರೇನ್​ ನಗರ ಚೆರ್ನಿಹಿವ್ ಮೇಲೆ ಕ್ಷಿಪಣಿ ದಾಳಿನಡೆದಿದ್ದು, ಕನಿಷ್ಠ 17 ನಾಗರಿಕರು
ಮೃತಪಟ್ಟಿದ್ದಾರೆ. ಮೂವರು ಮಕ್ಕಳು ಸೇರಿದಂತೆ 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Russia-Ukraine war: List of key events, day 784 | Russia-Ukraine war News |  Al Jazeeraಚೆರ್ನಿವ್‌ನ ಹಂಗಾಮಿ ಮೇಯರ್ ಒಲೆಕ್ಸಾಂಡರ್ ಲೋಮಿಕೊ ಅವರು ಬುಧವಾರ ಬೆಳಿಗ್ಗೆ 9 ಗಂಟೆಯ ನಂತರ ನಗರದ ಜನನಿಬಿಡ ಪ್ರದೇಶದಲ್ಲಿ ಮೂರು ಪ್ರಬಲ ಸ್ಫೋಟಗಳು ಸಂಭವಿಸಿವೆ, ಇದರಿಂದಾಗಿ ಸಾಕಷ್ಟು ಸಾವು ನೋವು ಸಂಭವಿಸಿದೆ, ಬಹುಮಹಡಿ ಕಟ್ಟಡಗಳು ಆಟಿಕೆಗಳಂತೆ ಕೆಳಗೆ ಬಿದ್ದಿದ್ದು, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Russia-Ukraine War: Lessons that Biden Failed to Learn and Ukraine Paid  Hefty Price Forದಾಳಿಯಲ್ಲಿ ರಷ್ಯಾ ಮೂರು ಇಸ್ಕಾಂಡರ್ ಕ್ರೂಸ್ ಕ್ಷಿಪಣಿಗಳನ್ನು ಬಳಸಿದೆ. ಉಕ್ರೇನ್​ನಲ್ಲಿ ವಾಯುರಕ್ಷಣಾ ವ್ಯವಸ್ಥೆಯ ಕೊರತೆ ಇರುವುದರಿಂದ ರಷ್ಯಾದ ಮೂರು ಕ್ಷಿಪಣಿಗಳನ್ನು ತುಂಡರಿಸಲು ಸಾಧ್ಯವಾಗಲಿಲ್ಲ, ಬೇರೆ ದೇಶಗಳ ನೆರವು ತಕ್ಷಣ ದೊರೆತಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!