ರಷ್ಯಾದಿಂದ ಡ್ರೋನ್‌ ದಾಳಿ: ಉಕ್ರೇನಿನ ಒಡೆಸ್ಸಾದಲ್ಲಿ ಕರೆಂಟ್‌ ಇಲ್ಲದೇ ಪರದಾಡುತ್ತಿದ್ದಾರೆ 1.5 ಮಿಲಿಯನ್‌ ಜನರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಷ್ಯಾ-ಉಕ್ರೇನ್‌ ಸಂಘರ್ಷ 10ನೇ ತಿಂಗಳು ದಾಟಿದ್ದು ಶನಿವಾರ ರಾತ್ರಿ ರಷ್ಯಾದ ಕಾಮಿಕೇಜ್‌ ಡ್ರೋನ್‌ ಗಳು ಉಕ್ರೇನಿನ ಒಡೆಸ್ಸಾ ಪ್ರದೇಶದ ಮೇಲೆ ದಾಳಿ ನಡೆಸಿದ್ದು ಇದರಿಂದ ವಿದ್ಯುತ್‌ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು ಸುಮಾರು 1.5 ಮಿಲಿಯನ್‌ ಗೂ ಅಧಿಕ ಜನರು ವಿದ್ಯುತ್‌ ಇಲ್ಲದೇ ಪರದಾಡುವಂತಾಗಿದೆ.

ರಾತ್ರಿಯ ಡ್ರೋನ್‌ ದಾಳಿಯ ನಂತರ ಒಡೆಸ್ಸಾ ಮತ್ತು ಪ್ರದೇಶದ ಇತರ ನಗರಗಳು ಮತ್ತು ಹಳ್ಳಿಗಳು ಕತ್ತಲೆಯಲ್ಲಿವೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ದಾಳಿಯು ಸಂಪೂರ್ಣ ವಿದ್ಯುತ್‌ ಪೂರೈಕೆ ವ್ಯವಸ್ಥೆಯನ್ನು ಅಸ್ಥವ್ಯಸ್ಥಗೊಳಿಸಿದ್ದು ಇವುಗಳನ್ನು ಸಂಪೂರ್ಣವಾಗ ಸರಿಪಡಿಸಲು ಮೂರು ತಿಂಗಳುಗಳಷ್ಟು ಸಮಯ ಬೇಕಾಗಬಹುದು ಎನ್ನಲಾಗಿದೆ. ಆಸ್ಪತ್ರೆಗಳು ಮತ್ತು ಹೆರಿಗೆ ವಾರ್ಡ್‌ಗಳು ಸೇರಿದಂತೆ ನಿರ್ಣಾಯಕ ಮೂಲಸೌಕರ್ಯಗಳಿಗೆ ಮಾತ್ರ ವಿದ್ಯುತ್ ಪ್ರವೇಶವಿದೆ. ಪರಿಸ್ಥಿತಿ ಇನ್ನೂ ಕಷ್ಟಕರವಾಗಿದೆ, ಆದರೆ ನಿಯಂತ್ರಣದಲ್ಲಿದೆ ಎಂದು ಅಧ್ಯಕ್ಷೀಯ ಆಡಳಿತದ ಉಪ ಮುಖ್ಯಸ್ಥ ಕೈರಿಲೊ ಟಿಮೊಶೆಂಕೊ ಹೇಳಿದ್ದಾರೆ.

ಈ ಪ್ರದೇಶದ ಗವರ್ನರ್ ಮ್ಯಾಕ್ಸಿಮ್ ಮಾರ್ಚೆಂಕೊ, ರಷ್ಯಾ ರಾತ್ರಿಯಿಡೀ ಕಾಮಿಕೇಜ್ ಡ್ರೋನ್ ಗಳಿಂದ ನಗರದ ಮೇಲೆ ದಾಳಿ ಮಾಡಿದೆ. ಇದರ ಪರಿಣಾಮವಾಗಿ ನಮ್ಮ ಪ್ರದೇಶದ ಬಹುತೇಕ ಎಲ್ಲಾ ಜಿಲ್ಲೆಗಳು ಮತ್ತು ಸಮುದಾಯಗಳಲ್ಲಿ ವಿದ್ಯುತ್ ಇಲ್ಲ,” ಎಂದು ಹೇಳಿದ್ದಾರೆ.

ಉಕ್ರೇನಿಯನ್ ವಾಯು ರಕ್ಷಣಾ ಘಟಕಗಳಿಂದ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!