ಉಕ್ರೇನ್‌ನ ಜಲವಿದ್ಯುತ್‌ ಸ್ಥಾವರ ಮೇಲೆ ರಷ್ಯಾ ಕ್ಷಿಪಣಿ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉಕ್ರೇನ್‌ನ ಜಲವಿದ್ಯುತ್‌ ಸ್ಥಾವರ ಸೇರಿದಂತೆ ದೇಶದ ಬಹುಪಾಲು ವಿದ್ಯುತ್‌ ಸೌಕರ್ಯಗಳನ್ನು ಗುರಿಯಾಗಿಸಿ ರಷ್ಯಾ ಡ್ರೋನ್‌ ಮತ್ತು ಕ್ಷಿಪಣಿ ದಾಳಿ ನಡೆಸಿದೆ.

ಇದರಿಂದಮೂವರು ನಾಗರಿಕರು ಹತರಾಗಿದ್ದಾರೆ . ಜೊತೆಗೆ ಹಲವೆಡೆ ವಿದ್ಯುತ್‌ ಪೂರೈಕೆ ವ್ಯತ್ಯಯಗೊಂಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘ರಾತ್ರಿ ವೇಳೆ ಡ್ರೋನ್‌ ಮತ್ತು ರಾಕೆಟ್‌ ದಾಳಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ದೇಶದ ಇಂಧನ ವಲಯಗಳ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿ ಇದು. ರಷ್ಯಾದ ಗುರಿ ಹಾನಿ ಮಾಡುವುದಷ್ಟೇ ಆಗಿಲ್ಲ, ಕಳೆದ ವರ್ಷದಂತೆ ನಮ್ಮ ಇಂಧನ ವ್ಯವಸ್ಥೆಗೆ ದೊಡ್ಡಮಟ್ಟದಲ್ಲಿ ಅಡಚಣೆ ಮಾಡುವುದಾಗಿದೆ’ ಎಂದು ಉಕ್ರೇನ್‌ ಇಂಧನ ಸಚಿವ ಜರ್ಮನ್‌ ಗಲುಶ್‌ಚೆಂಕೊ ತಿಳಿಸಿದ್ದಾರೆ.

ಈ ದಾಳಿಯಿಂದ ಯುರೋಪ್‌ನ ಅತಿ ದೊಡ್ಡ ಝಪೊರಿಝಿಯಾ ಅಣು ವಿದ್ಯುತ್‌ ಸ್ಥಾವರಕ್ಕೆ ವಿದ್ಯುತ್‌ ಪೂರೈಸುವ ನಿಪ್ರೊ ಜಲವಿದ್ಯುತ್‌ ಸ್ಥಾವರದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸ್ಥಾವರಕ್ಕೆ ವಿದ್ಯುತ್‌ ಪೂರೈಸುತ್ತಿದ್ದ 750 ಕೆ.ವಿ ಮಾರ್ಗ ಕಡಿತವಾಗಿದೆ.ಝಪೊರಿಝಿಯಾ ಅಣುಸ್ಥಾವರವನ್ನು ರಷ್ಯಾ ಪಡೆಗಳು ಆಕ್ರಮಿಸಿವೆ. ಸ್ಥಾವರದ ಸುತ್ತಲೂ ಕದನ ನಡೆಯುತ್ತಿದ್ದು, ಸಂಭಾವ್ಯ ಅಣು ದುರಂತದ ಆತಂಕ ಎದುರಾಗಿದೆ.

ಕಳೆದ ರಾತ್ರಿಯ ದಾಳಿಯಲ್ಲಿ ಒಬ್ಬರು ಮೃತಪಟ್ಟು, ಎಂಟು ಜನ ಗಾಯಗೊಂಡಿದ್ದಾರೆ ಎಂದು ಝಪೊರಿಝಿಯಾ ಪ್ರಾದೇಶಿಕ ಗವರ್ನರ್ ಇವಾನ್ ಫೆಡೊರೊವ್ ಹೇಳಿದ್ದಾರೆ. ಖ್ಮೆಲ್‌ನಿಟ್‌ಸ್ಕಿ ಪ್ರದೇಶದಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!