March 7, 2026
Saturday, March 7, 2026
spot_img

ಉಕ್ರೇನ್‌ನ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಇಬ್ಬರು ಮಕ್ಕಳು ಸಹಿತ ಎಂಟು ಮಂದಿ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌-ಇಸ್ರೇಲ್‌ ಯುದ್ದದಿಂದಾಗಿ ಮಧ್ಯಪ್ರಾಚ್ಯ ಸದ್ಯ ರಣರಂಗವಾಗಿದ್ದು, ಇದರ ನಡುವೆ ರಷ್ಯಾವು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನಲ್ಲಿರುವ ಐದು ಅಂತಸ್ತಿನ ವಸತಿ ಕಟ್ಟಡಕ್ಕೆ ಕ್ಷಿಪಣಿ ದಾಳಿ ನಡೆಸಿದ್ದು, ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಷ್ಯಾದ ದಾಳಿಗಳಲ್ಲಿ ಸ್ವಲ್ಪ ವಿರಾಮದ ನಂತರ ಮತ್ತೆ ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಮತ್ತಷ್ಟು ಆತಂಕ ಮನೆ ಮಾಡಿದೆ.

ಉಕ್ರೇನ್‌ನ ವಾಯುಪಡೆ ಶನಿವಾರ ರಷ್ಯಾ 480 ದಾಳಿ ಡ್ರೋನ್‌ಗಳು ಮತ್ತು 29 ಕ್ಷಿಪಣಿಗಳನ್ನು ದಾಳಿಯಲ್ಲಿ ಉಡಾಯಿಸಿದೆ ಎಂದು ಹೇಳಿದೆ. ಹೆಚ್ಚಿನವುಗಳನ್ನು ತಡೆಹಿಡಿಯಲಾಗಿದ್ದರೂ, ವಾಯುಪಡೆಯು 22 ಸ್ಥಳಗಳನ್ನು ಹೊಡೆದುರುಳಿಸಿದೆ ಎಂದು ಹೇಳಿದೆ.

ರಕ್ಷಣಾ ಪ್ರಯತ್ನಗಳು ನಡೆಯುತ್ತಿದ್ದು,ಹೆಚ್ಚಿನ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ಉಕ್ರೇನ್‌ನ ಒಡೆಸಾ ಪ್ರದೇಶದಲ್ಲಿ ಬಂದರು ಮೂಲಸೌಕರ್ಯದ ಮೇಲಿನ ದಾಳಿಯ ನಂತರ ಬೆಂಕಿ ಕಾಣಿಸಿಕೊಂಡಿತು, ಅದೇ ರೀತಿ ಇತರ ಪ್ರದೇಶಗಳಲ್ಲಿ ಇಂಧನ ಮತ್ತು ರೈಲ್ವೆ ಮೂಲಸೌಕರ್ಯಗಳು ಸಹ ಹಾನಿಗೊಳಗಾದವು ಎಂದು ತಿಳಿಸಿದ್ದಾರೆ.

ಈ ದಾಳಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆಕ್ರೋಶ ಹೊರಹಾಕಿದ್ದು, ರಷ್ಯಾ 29 ಕ್ಷಿಪಣಿಗಳು ಮತ್ತು 480 ಡ್ರೋನ್‌ಗಳೊಂದಿಗೆ ರಾತ್ರೋರಾತ್ರಿ ಉಕ್ರೇನ್ ಮೇಲೆ ದಾಳಿ ಮಾಡಿದೆ. ಕೀವ್ ಮತ್ತು ಇತರ ಮಧ್ಯ ಪ್ರದೇಶಗಳಲ್ಲಿನ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದೆ. ದೇಶಾದ್ಯಂತ ಏಳು ಸ್ಥಳಗಳಲ್ಲಿ ಹಾನಿಯಾಗಿದೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !