ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತವರೂರು ಕ್ರಿವಿ ರಿಹ್‌ನ ಪ್ರದೇಶದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ18 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಗರದ ಮೇಲೆ ನಡೆದ ದಾಳಿಯು ವಸತಿ ಬ್ಲಾಕ್‌ಗಳನ್ನು ಹಾನಿಗೊಳಿಸಿದ್ದು, ಭಾರೀ ಬೆಂಕಿಗೆ ಕಾರಣವಾಯಿತು ಎಂದು ಡ್ನಿಪ್ರೊಪೆಟ್ರೋವ್ಸ್ಕ್ ಗವರ್ನರ್ ತಿಳಿಸಿದ್ದಾರೆ.
ಕನಿಷ್ಠ 50 ಜನರು ಗಾಯಗೊಂಡಿದ್ದಾರೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಇದೀಗ 30 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.