ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳವಾರ ಸಂಜೆ ರಷ್ಯಾ ಕ್ಷಿಪಣಿ ದಾಳಿಗೆ ಪೂರ್ವ ಉಕ್ರೇನ್ನಲ್ಲಿ ನಾಲ್ವರು ಸಾವನ್ನಪ್ಪಿರುವ ಗಟನೆ ನಡೆದಿದೆ. ಕ್ರಾಮಾಟೋರ್ಸ್ಕ್ ಪ್ರದೇಶದಲ್ಲಿ ಕ್ಷಿಪಣಿ ಹೊಡೆದು ಒಂದು ಮಗು ಸೇರಿದಂತೆ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
ಡೊನೆಟ್ಸ್ಕ್ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಪಾವ್ಲೋ ಕೈರಿಲೆಂಕೊ ಪ್ರಕಾರ, ದಾಳಿ ಸುಮಾರು 7:30ಕ್ಕೆ ಸಂಭವಿಸಿತು ಎಂದು ಸ್ಪಷ್ಟಪಡಿಸಿದರು.”ನಾವು ಈಗ ನಗರದಲ್ಲಿ ಗಾಯಗೊಂಡವರು ಮತ್ತು ಸತ್ತವರ ಸಂಖ್ಯೆ ಎಷ್ಟೆಂದು ಮಾಹಿತಿ ಕಲೆಹಾಕುತ್ತಿದ್ದೇವೆ. ಈ ಸ್ಥಳ ನಾಗರಿಕರಿಂದ ಕಿಕ್ಕಿರಿದ ಮಾರುಕಟ್ಟೆಯಾಗಿದೆ” ಎಂದರು.
“ರಷ್ಯಾ ಉದ್ದೇಶಪೂರ್ವಕವಾಗಿ ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ” ಎಂದು ಉಕ್ರೇನ್ನ ಆಂತರಿಕ ವ್ಯವಹಾರಗಳ ಸಚಿವ ಇಹೋರ್ ಕ್ಲೈಮೆಂಕೊ ಟೆಲಿಗ್ರಾಮ್ ಕಾಮೆಂಟ್ಗಳಲ್ಲಿ ಹೇಳಿದ್ದಾರೆ. ದಾಳಿ ನಡೆದ ಕೂಡಲೇ ಗಾಯಾಳುಗಳಿಗೆ ತುರ್ತು ಸೇವೆಗಳು ಆರಂಭವಾದವು.
ಫೆಬ್ರವರಿ 24, 2022 ರಂದು ಪ್ರಾರಂಭವಾದ ರಷ್ಯಾ-ಉಕ್ರೇನ್ ಯುದ್ಧವು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಈಗಲೂ ಎರಡು ರಾಷ್ಟ್ರಗಳ ನಡುವೆ ಯುದ್ಧವು ಉಲ್ಬಣಗೊಳ್ಳುತ್ತಲೇ ಇದೆ.