ಅಕ್ರಮವಾಗಿ ಭಾರತ-ಪಾಕ್ ಗಡಿ ದಾಟಿದ ಪಾಕಿಸ್ತಾನಿ ಪ್ರಜೆ ಬಿಎಸ್‌ಎಫ್‌ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ದಾಟುತ್ತಿದ್ದ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಪಡೆ ವಶಕ್ಕೆ ತೆಗೆದುಕೊಂಡಿದೆ.

ಪಂಜಾಬ್ ಫ್ರಾಂಟಿಯರ್ ಪ್ರಕಾರ, ಪಾಕಿಸ್ತಾನಿ ಪ್ರಜೆಯು ಫಿರೋಜ್‌ಪುರ ಜಿಲ್ಲೆಯ ಹಜಾರಾ ಸಿಂಗ್ ವಾಲಾ ಗ್ರಾಮದ ಬಳಿ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಭಾರತದ ಭೂಪ್ರದೇಶವನ್ನು ಪ್ರವೇಶಿಸುತ್ತಿದ್ದಾಗ ಬಿಎಸ್‌ಎಫ್ ಪಡೆಗಳಿಗೆ ಸಿಕ್ಕಿಬಿದ್ದಿದ್ದಾನೆ.

ಬಂಧಿತ ಪಾಕ್ ಪ್ರಜೆ ಅಜಾಗರೂಕತೆಯಿಂದ ಭಾರತದ ಪ್ರದೇಶವನ್ನು ದಾಟಿ ಬಂದಿರುವುದು ತನಿಖೆಯ ವೇಳೆ ಬಯಲಾಗಿದೆ.

“ಪಾಕ್ ಪ್ರಜೆ ಅಚಾತುರ್ಯದಿಂದ ಗಡಿ ದಾಟಿದ್ದಾನೆ. ಆತನಿಂದ ಆಕ್ಷೇಪಾರ್ಹವಾದ ಯಾವುದನ್ನೂ ವಶಪಡಿಸಿಕೊಳ್ಳಲಾಗಿಲ್ಲ” ಎಂದು ಪಿಆರ್‌ಒ ತಿಳಿಸಿದ್ದಾರೆ.

ಅಜಾಗರೂಕ ಗಡಿ ದಾಟಿದ ಕಾರಣ, ಮಾನವೀಯ ಆಧಾರದ ಮೇಲೆ ಪಾಕಿಸ್ತಾನದ ರೇಂಜರ್‌ಗಳಿಗೆ ಹಸ್ತಾಂತರಿಸಲಾಯಿತು ಎಂದು ಪಂಜಾಬ್ ಫ್ರಾಂಟಿಯರ್ ತಿಳಿಸಿದೆ. ಜೊತೆಗೆ ತಿಳಿಯದೆ ಗಡಿ ದಾಟುವವರ ಜೊತೆ ವ್ಯವಹರಿಸುವಾಗ ಬಿಎಸ್‌ಎಫ್ ಯಾವಾಗಲೂ ಮಾನವೀಯ ವಿಧಾನವನ್ನು ಅನುಸರಿಸುವುದಾಗಿ ಪಿಆರ್‌ಒ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!