ರಷ್ಯಾ-ಉಕ್ರೇನ್‌ ಯುದ್ಧ: ರಷ್ಯಾ ಕ್ಷಿಪಣಿ ದಾಳಿಗೆ 23 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಉಕ್ರೇನ್‌ನ ವಿನ್ನಿಟ್ಸಿಯಾದಲ್ಲಿ ರಷ್ಯಾದ ಕ್ಷಿಪಣಿ ಅಪ್ಪಳಿಸಿದ್ದು ದಾಳಿಯ 23 ನಾಗರಿಕರು ಸಾವನ್ನಪ್ಪಿರುವುದಾಗಿ ಉಕ್ರೇನ್‌ ಅದೀಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಮೂವರು ಮಕ್ಕಳಿದ್ದರು ಎನ್ನಲಾಗಿದೆ. ಇದುವರೆಗೆ ಆರು ಮೃತ ದೇಹಗಳನ್ನು ಮಾತ್ರ ಗುರುತಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಯುತ್ತಿದೆ.

ಕ್ಷಿಪಣಿ ದಾಳಿಯಲ್ಲಿ ಉಕ್ರೇನ್‌ನ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ. 34 ಮಂದಿ ಗಂಭೀರವಾಗಿ ಗಾಯಗಳಾಗಿವೆ 39 ಮಂದಿ ಎಲ್ಲಿದ್ದಾರೆ ಎಂಬುದು ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ರಷ್ಯಾ ನಾಗರೀಕರನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ.

ಪ್ರತಿದಿನ ಇಂತಹ ದಾಳಿಗಳು ನಡೆಯುತ್ತಲೇ ಇವೆ ಎಂದು ಟೆಲಿಗ್ರಾಂನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ರಷ್ಯಾ ದಾಳಿಗಳು ಮಿಲಿಟರಿಯ ಬದಲಿಗೆ ನಾಗರಿಕರನ್ನು ಗುರಿಯಾಗಿಸುತ್ತಿವೆ ಇದೊಂದು ಭಯೋತ್ಪಾದನಾ ಕೃತ್ಯ ಎಂದು ಕೆಂಡಕಾರಿದ್ದಾರೆ. ರಷ್ಯಾ ಉಡಾಯಿಸಿದ ಎರಡು ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಮತ್ತೆರಡು ಕ್ಷಿಪಣಿಗಳು ವಿನ್ನಿಟ್ಸಿಯಾದಲ್ಲಿನ ಅಪಾರ್ಟ್ಮೆಂಟ್‌ಗೆ ಡಿಕ್ಕಿ ಹೊಡೆದಿವೆ ಎಂದು ತಿಳಿಸಿದ್ದಾರೆ. ಆದರೆ ರಷ್ಯಾದ ಅಧಿಕಾರಿಗಳು ದಾಳಿಯನ್ನು ಅಧಿಕೃತವಾಗಿ ಘೋಷಿಸಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!