ರಷ್ಯಾ ಅಧ್ಯಕ್ಷ ಪುಟಿನ್‌ ಬದ್ಧವೈರಿ ಅಲೆಕ್ಸಿ ನವಲ್ನಿ ಜೈಲಿನಲ್ಲೇ ಸಾವು?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಷ್ಯಾ ವಿಪಕ್ಷ ನಾಯಕ, ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಟೀಕಾಕಾರ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಶುಕ್ರವಾರ (ಫೆ.16 ರಂದು) ರಷ್ಯಾದ ಸರ್ಕಾರಿ ಮಾಧ್ಯಮವನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ. ಯಮಲೋ-ನೆನೆಟ್ಸ್ ಪ್ರಾಂತ್ಯದಲ್ಲಿ ರಷ್ಯಾ ವಿಪಕ್ಷ ನಾಯಕ ಜೈಲು ಶಿಕ್ಷೆ ಅನುಭವಿಸುತ್ತಿದ್ದರು.ವಾಕಿಂಗ್ ಬಳಿಕ ಅಲೆಕ್ಸಿ ನವಲ್ನಿ ಅಸ್ವಸ್ಥರಾದರು ತಕ್ಷಣವೇ ಪ್ರಜ್ಞಾಹೀನರಾದರು. ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರಾದರೂ ಅವರು ಬದುಕಿ ಉಳಿಯಲಿಲ್ಲ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

ಜೈಲು ಶಿಕ್ಷೆಗೆ ಗುರಿಯಾಗಿದ್ದ ಖೈದಿಯ ಸಾವನ್ನು ವೈದ್ಯರು ದೃಢಪಡಿಸಿದ್ದಾರೆ. ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ.

ಏತನ್ಮಧ್ಯೆ, ನವಲ್ನಿ ಸಾವಿನ ಬಗ್ಗೆ ಪುಟಿನ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಹೇಳಿದ್ದಾರೆ.

ಅಲೆಕ್ಸಿ ನವಲ್ನಿ ಜೈಲಿಗೆ ಸ್ಥಳಾಂತರಿಸಿದ್ದೇಕೆ?
ಅಲೆಕ್ಸಿ ನವಲ್ನಿ ಉಗ್ರವಾದದ ಆರೋಪದ ಮೇಲೆ 19 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಡಿಸೆಂಬರ್‌ನಲ್ಲಿ ಮಧ್ಯ ರಷ್ಯಾದ ವ್ಲಾಡಿಮಿರ್ ಪ್ರದೇಶದ ಜೈಲಿನಿಂದ ಮಾಸ್ಕೋದಿಂದ ಈಶಾನ್ಯಕ್ಕೆ 1,900 ಕಿಲೋಮೀಟರ್ ದೂರದಲ್ಲಿರುವ ಖಾರ್ಪ್ ಪಟ್ಟಣದ ಪೋಲಾರ್ ವುಲ್ಫ್” ಎಂಬ ಅಡ್ಡಹೆಸರಿರುವ “ವಿಶೇಷ ಆಡಳಿತ” ಪೆನಾಲ್ ಕಾಲನಿ- IK-3ಗೆ ಸ್ಥಳಾಂತರಿಸಲಾಯಿತು. ಇದು ರಷ್ಯಾದಲ್ಲಿ ಅತ್ಯಂತ ಕಠಿಣವಾದ ಜೈಲು ಎಂದು ಪರಿಗಣಿಸಲಾಗಿದೆ, ಅಲ್ಲಿ ಹೆಚ್ಚಿನ ಬಂಧಿತರು ಗಂಭೀರ ಅಪರಾಧಗಳಿಗೆ ಶಿಕ್ಷೆಗೊಳಗಾದವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!